This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೀದಿ ನಾಯಿಗಳಿಗೆ ಆಹಾರ ಉಣ ಬಡಿಸಲು ಆಕ್ಷೇಪ : ನ್ಯಾಯವಾದಿ ತಕರಾರು ವಿರುದ್ಧ ಸಿಎಂಗೆ ಮನವಿ ರವಾನಿಸಿದ ಮಹಿಳೆಯರು ! Objection to serving food and fodder to stray dogs: Women have sent a petition to the CM against the legal dispute!


 

 

ಪ್ರಾಣಿಪ್ರಿಯರಿಗೆ ನ್ಯಾಯವಾದಿಯ ಆಕ್ಷೇಪ ಪ್ರಕರಣ: ಹ್ಯೂಮನ್ ರೈಟ್ಸ್ ಕಚೇರಿಯಿಂದ ಎಸ್ಪಿಗೆ ನಿರ್ದೇಶನ

ಬೆಳಗಾವಿ :
ಬೀದಿನಾಯಿಗಳಿಗೆ ಅನ್ನ ಹಾಕುವ ಪ್ರಾಣಿ ದಯಾ ಸಂಘವೊಂದರ ಪ್ರಾಣಿ ಪ್ರೇಮಿ ಮತ್ತು ಇದನ್ನು ಆಕ್ಷೇಪಿಸುವ ಎದುರು ಮನೆಯ ನ್ಯಾಯವಾದಿಯ ವಿಷಯ ಈಗ ರಾಜ್ಯದ ದೊರೆ ಸಿಎಂ ಜೊತೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದ್ದು, ಆಯೋಗ ಮತ್ತು ಮುಖ್ಯಮಂತ್ರಿ ಕಚೇರಿ ಜಿಲ್ಲಾ ಎಸ್ಪಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.
ಬೆಳಗಾವಿ ನಗರದ Belgaum Animl Welfare Associationನ ಅನಿತಾ ಶಂಕರ ದೊಡ್ಡಮನಿ ಅವರು ನಗರದ ಶಹಾಪುರ ಮಾರುತಿ ಗಲ್ಲಿಯ ಮನೆಯ ಬೀದಿಯಲ್ಲಿ ನಾಯಿಗಳಿಗೆ ಆಹಾರ ಉಣಬಡಿಸಿ ಪ್ರಾಣಿ ಪ್ರೇಮ ಮೆರೆಯುತ್ತಿದ್ದಾರೆ.
ಆದರೆ ಇವರ ಮನೆಯ ಎದುರಿನ ನ್ಯಾಯವಾದಿ ವಿನಾಯಕ ವಲ್ಲೇಪೂರಕರ ಎಂಬುವವರು ನಾಯಿಗಳ ಕಾಟ ಎಂಬ ಬಗ್ಗೆ ಆಕ್ಷೇಪಿಸುತ್ತ ಬರುತ್ತಿರುವ ಬಗ್ಗೆ ಅನಿತಾ ದೊಡ್ಡಮನಿ ಮಾನವ ಹಕ್ಕು ಆಯೋಗ ಹಾಗೂ ಮುಖ್ಯಮಂತ್ರಿಗೆ ನ್ಯಾಯವಾದಿಯ ವಿರುದ್ಧ ದೂರು ಸಲ್ಲಿಸಿದ್ದರು.

ಇದಕ್ಕೂ ಮೊದಲು ಪ್ರಾಣಿ ಕಲ್ಯಾಣ ಮಂಡಳಿಯ ಅನಿತಾ ಅವರು ಪೊಲೀಸ್ ಠಾಣೆಗೆ ನ್ಯಾಯವಾದಿಯ ವಿರುದ್ಧ ದೂರು ಸಲ್ಲಿಸಿದರೂ ಪೊಲೀಸರು ದೂರಿಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವುದು ದೂರುದಾರರಾದ ಅನಿತಾ ಅವರ ತೀವ್ರ ಕೋಪಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಕಚೇರಿ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಎಸ್ಪಿ/ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಪ್ರಾಣಿಗಳ ಬಗ್ಗೆ ತಾವು ಅಪಾರ ಪ್ರೀತಿ ಹೊಂದಿದ್ದು ಅವುಗಳಿಗೆ ಆಹಾರ ಉಣಬಡಿಸಿ ಸಲಹುವಲ್ಲಿ ನನಗೆ ಯಾರದೇ ಆಕ್ಷೇಪಣೆ ತರವಲ್ಲ, ಸಹಿಸೊಲ್ಲ ಎಂದು ಅನಿತಾ ದೊಡ್ಡಮನಿ ತಿಳಿಸಿದ್ದಾರೆ.


Jana Jeevala
the authorJana Jeevala

Leave a Reply