ಬೆಳಗಾವಿ : ರಾಯಬಾಗ ತಾಲೂಕು ಬೊಮ್ಮನಾಳ ಗ್ರಾಮದಲ್ಲಿ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಯಲ್ಲವ್ವ ಅರ್ಜುನ ಕರಿಹೊಳಿ(30), ಮಕ್ಕಳಾದ ಸ್ವಾತಿ(5), ಮುತ್ತಪ್ಪ(1)ಮೃತ ಪಟ್ಟವರು. ಪತಿ ಅರ್ಜುನ-ಯಲ್ಲವ್ವ ಜಗಳವಾಡಿದ್ದಾರೆ. ನಂತರ ಹೊಲಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಲ್ಲವ್ವ ಅವರ ತಾಯಿ ಶೋಭಾ ಅವರು, ಅರ್ಜುನ್ ಮದ್ಯವ್ಯಸನಿ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಅವನೇ ಕೊಲೆ ಮಾಡಿರುವ ಬಗ್ಗೆ ರಾಯಬಾಗ ಪೊಲೀಸರಿಗೆ ದೂರು ನೀಡಿದ್ದಾರೆ.