ಬೆಳಗಾವಿ : ರಾಯಭಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಹೊರವೊಲಯದಲ್ಲಿ ಕೃಷಿ ಗದ್ದೆಯಲ್ಲಿ ತೋಳಗಳು ದಾಳಿ ನಡೆಸಿದ್ದು 25ಕ್ಕೂ ಹೆಚ್ಚು ಕುರಿಗಳು ತಡರಾತ್ರಿ
ಅಸುನೀಗಿವೆ.
ಮಾಲೀಕ ಮಲ್ಲಪ್ಪ ಯಲ್ಲಪ್ಪ ಹೀರೆಕೊಡಿ ಎಂಬುವವರು ಊಟಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ರಾಯಬಾಗ ಪೊಲೀಸರು ಪರಿಶೀಲಿಸಿದ್ದು, ರಬಕವಿ ಎಂಬುವವರ ತೋಟದ ಜಮೀನದಲ್ಲಿ ಟೆಂಟ್ ಹೂಡಲಾಗಿದ್ದ ಸ್ಥಳದಲ್ಲಿ ಕುರಿಗಳನ್ನು ತೋಳಗಳು ಬಂದು ಸಾಯಿಸಿವೆ. ಸದರಿ ಸ್ಥಳಕ್ಕೆ ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿದ್ದು, ವಲಯ ಅರಣ್ಯಾಧಿಕಾರಿ & ಪಶುಸಂಗೋಪಣಾ ಇಲಾಖೆ ಅಧಿಕಾರಿಗಳ ಪರಿಶೀಲನೆ ಅಗತ್ಯವಿದೆ ಎಂದು ಎಸ್ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.