ಬೆಂಗಳೂರು :
ಪತಿ ಚಾಕೊಲೇಟ್ ತಂದುಕೊಡಲಿಲ್ಲ ಎಂದು ಬೇಸರಿಸಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಣ್ಣೂರಿನ ನಂದಿನಿ (30) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ನಂದಿನಿ ಪತಿ ಬೆಂಗಳೂರಿನ ಸಲೂನ್ ನಲ್ಲಿ ಕೆಲಸ ಮಾಡುತ್ತಾರೆ. ಪತ್ನಿ ಏನೇ ಕೇಳಿದರೂ ತಂದು ಕೊಡುತ್ತಿದ್ದರು. ಅಷ್ಟು ಪ್ರೀತಿ ಮಾಡುತ್ತಿದ್ದನು.
ಆದರೆ ಚಾಕಲೇಟ್ ತಂದು ಕೊಡು ಅಂತ ಕೇಳಿದ್ರೆ ಆತ ಕೆಲಸದ ಒತ್ತಡದಲ್ಲಿ ತಂದು ಕೊಟ್ಟಿರಲಿಲ್ಲ. ಈ ವಿಚಾರಕ್ಕೆ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೆಣ್ಣೂರು ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.