ಯಾರಾಗ್ತಾರೆ ಬಿಜೆಪಿ ಮೊದಲ ಮೇಯರ್..?
ಎಲ್ಲರ ಚಿತ್ತ ಬೆಳಗಾವಿಯತ್ತ..!
ಬಿಜೆಪಿ ಬಿಡದ ಬ್ರಾಹ್ಮಣರಿಗೆ ಮಣೆ ಹಾಕುತ್ತಾ ಕೇಸರಿ ಪಕ್ಷ..!
ಬೆಳಗಾವಿ: ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಫಲಿತಾಂಶ ಬಂದು ಬರೊಬ್ಬರಿ 17 ತಿಂಗಳ ನಂತರ ನಡೆಯುತ್ತಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಬೆಳಗಾವಿಯತ್ತ ನೆಟ್ಟಿದೆ.
ಗಡಿನಾಡು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಯಾರಾಗ್ತಾರೆ ಎನ್ನುವುದು ಬೇರೆ ಮಾತು. ಆದರೆ ಬಿಜೆಪಿ ಇತಿಹಾಸ ಸೃಷ್ಟಿ ಮಾಡುತ್ತದೆ ಎನ್ನುವುದು ಶತಸಿದ್ಧ.
ಗಡಿನಾಡು ಬೆಳಗಾವಿ ಎಂದಾಕ್ಷಣ ಬೆಂಗಳೂರು ಅಷ್ಟೇ ಅಲ್ಲ ಇಡೀ ರಾಜ್ಯದ ಚಿತ್ತ ಬೆಳಗಾವಿ ಮೇಲೆ ನೆಟ್ಟಿರುತ್ತದೆ.
ಅದರಲ್ಲೂ ಪಾಲಿಕೆ ಮೇಯರ್ ಚುನಾವಣೆ ಬಂದಾಗ ಹಿಂದೆ ಸಾಕಷ್ಟು ಹೋರಾಟಗಳೇ ನಡೆದು ಹೋಗಿವೆ.
ಬದಲಾದ ಕಾಲ..!
ಈ ಹಿಂದೆ ಪಕ್ಷಾತೀತವಾಗಿ ಪಾಲಿಕೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಗಿನ ನಗರಸೇವಕರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ಮೇಯರ್ ಚುನಾವಣೆ ಸಂದರ್ಭದಲ್ಲಿ ನಗರಸೇವಕರು ಕ್ಲಬ್ ರಸ್ತೆಯಲ್ಲಿ ಶೇಠ ಮನೆಯ ಹೊರಗೆ ಬೀಡು ಬಿಟ್ಟಿರುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೆ. ಚುನಾವಣೆ ಪಕ್ಷದ ಆಧಾರದ ಮೇಲೆ ನಡೆದಿದೆ.
ಹೀಗಾಗಿ ಈಗ ನಗರಸೇವಕರಿಗೆ ಆ ರೀತಿಯ ಪರಿಸ್ಥಿತಿ ಇಲ್ಲ ಎನ್ನುವುದು ಬೇರೆ ಮಾತು.
17 ತಿಂಗಳು..!
ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಫಲಿತಾಂಶ ಬಂದು ಬರೊಬ್ಬರಿ 17 ತಿಂಗಳ ನಂತರ ನಡೆಯುತ್ತಿದೆ.ಹೀಗಾಗಿ ಎಲ್ಲರಲ್ಲಿ ಒಂದು ರೀತಿಯ ಕುತೂಹಲ ಇದೆ. ಕರ್ನಾಟಕ ಮಹಾರಾಷ್ಟ್ರಗಡಿ ವಿವಾದ ಇನ್ನೂ ಜೀವಂತವಾಗಿರುವಾಗಲೇ ಮೇಯರ್ ಚುನಾವಣೆ ನಡೆಯುತ್ತಿರುವುದು ಎಲ್ಲರ ಚಿತ್ತ ಬೆಳಗಾವಿಯತ್ತ ತಿರುಗುವ ಹಾಗೆ ಮಾಡಿದೆ. ಬರುವ ಫೆಬ್ರುವರಿ 6 ರಂದು ಮೇಯರ್ ಚುನಾವಣೆ ನಡೆಯಲಿದೆ.
ಮೇಯರ GM, ಉಪಮೇಯರ್ OBC M ಮೀಸಲಾಗಿದೆ.
ಬೆಳಗಾವಿ ಮಹಾನಗರಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಮೇಯರ್ ಸ್ಥಾನ ಓಬಿಸಿ ಬ ಮಹಿಳೆಗೆ ಮೀಸಲಾಗಿದೆ.
ಮಂಕಾದ ಎಂಇಎಸ್..!
ಹಲವು ದಶಕಗಳ ಕಾಲ ಪಾಲಿಕೆಯಲ್ಲಿ ಅಧಿಕಾರ ನಡೆಸಿ ತಮ್ಮದೇ ಎಂದು ಬೀಗುತ್ತಿದ್ದ ಎಂಇಎಸ್ ಈ ಚುನಾವಣೆಯಲ್ಲಿ ಸಂಪೂರ್ಣ ಮುಗ್ಗರಿಸಿ ಮಣ್ಣಾಗಿತ್ತು.
ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರ ಪ್ರಯತ್ನದ ಫಲವಾಗಿ 58 ಸ್ಥಾನಗಳ ಪೈಕಿ 35 ಸ್ಥಾನಗಳನ್ನು ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರವೊಂದರಲ್ಲಿಯೇ ಬರುವ 25 ವಾರ್ಡ್ ಗಳಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದುಕೊಂಡಿದೆ.
ಯಾರಾಗ್ತಾರೆ ಮೇಯರ್..!
ಇತಿಹಾಸ ಸೃಷ್ಟಿಸಲಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಮೊದಲ ಬಿಜೆಪಿ ಮೇಯರ್ ಯಾರಾಗ್ತಾರೆ ಎನ್ನುವ ಚರ್ಚೆ ಈಗ ಎಲ್ಲೆಡೆ ನಡೆದಿದೆ.
ಆದರೆ ಶಾಸಕರು ಅಷ್ಟೇ ಅಲ್ಲ ಹೈಕಮಾಂಡ, ಸಂಘ ಪರಿವಾರದವರು ತೀರ್ಮಾನ ಇಲ್ಲಿ ಅಂತಿಮವಾಗಿದೆ.
ರೇಸನಲ್ಲಿ ಯಾರ್ಯಾರು?*
ಸದ್ಯ ಬಂದಿರುವ ಮಾಹಿತಿ ಪ್ರಕಾರ 22 ಸ್ಥಾನಗಳನ್ನು ಗೆದ್ದ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಸ್ಥಾನ ಮತ್ತು ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಉಪಮೇಯರ್ ಸ್ಥಾನ ಎನ್ನುವ ಮಾತಿದೆ.
ಇಲ್ಲಿ ವಾರ್ಡ ನಂಬರ 43 ರ ನಗರ ಸೇವಕಿ ವಾಣಿ ವಿಲಾಸ ಜೋಶಿ ಮತ್ತು ವಾರ್ಡ ನಂಬರ 50 ರ ನಗರ ಸೇವಕಿ ಸಾರಿಕಾ ಪಾಟೀಲ ಮೇಯರ್ ಹುದ್ದೆಯ ರೇಸನಲ್ಲಿದ್ದಾರೆ.
ಬಿಜೆಪಿ ಬಿಡದ ಬ್ರಾಹ್ಮಣರಿಗೆ ಮಣೆ ಹಾಕುತ್ತಾ ಕೇಸರಿ ಪಕ್ಷ..?
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮರಾಠಾರಂತೆ ಬ್ರಾಹ್ಮಣ ರ ಮತಗಳು ನಿರ್ಣಾಯಕವಾಗಿವೆ.
ದಕ್ಷಿಣದಲ್ಲಿ ಬರೊಬ್ಬರಿ 30 ಸಾವಿರ ಬ್ರಾಹ್ಮಣರ ಮತಗಳಿವೆ. ಇವರು ಯವತ್ತು ಬಿಜೆಪಿ ಬಿಟ್ಟು ಹೋಗದ ಮತದಾರರು.
ಈ ಹಿಂದೆ ತಮ್ಮ ಸಮುದಾಯದವರಾದ ಬೆಳಗಾವಿಯ ಪ್ರಸಿದ್ಧ ಚಿನ್ನದ ವ್ಯಾಪಾರಿ ಪೋತದಾರ ಕುಟುಂಬವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದಾಗ ಅವರನ್ನು ಬಿಟ್ಟು ಬಿಜೆಪಿಗೆ ಸಂಪೂರ್ಣ ಸಮುದಾಯ ಕಣ್ಮುಚ್ಚಿ ಬೆಂಬಲಿಸುತ್ತ ಬಂದಿದೆ. ಹೀಗಾಗಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಬಿಜೆಪಿ ಮುಖಂಡರು ಹಾಗೂ ಸಂಘ ಬೆಂಬಲ ನೀಡುವ ನಿರೀಕ್ಷೆ ಹೆಚ್ಚಿದೆ.
ಇಲ್ಲಿ ಬ್ರಾಹ್ಮಣ ಸಮುದಾಯದ ವಾಣಿ ವಿಲಾಸ ಜೋಶಿ ಅವರು ಶಾಸಕ ಅಭಯ ಪಾಟೀಲರ ರಾಜಕೀಯ ಬದ್ಧ ವೈರಿ ಎಂಇಎಸ್ ನ ಕಿರಣ ಸಾಯನಾಯ್ಕ ಅವರ ಪತ್ನಿಯನ್ನು ಪರಾಭವಗೊಳಿಸಿದ್ದಾರೆ. ಹಿಂದೆ ಕಿರಣ ಸಾಯನಾಯ್ಕ ಮೇಯರ್ ಆಗಿ ಮತ್ತು ಅವರ ಪತ್ನಿ ಕೂಡ ನಗರಸೇವಕಿಯಾಗಿದ್ದವರು. ಅದಲ್ಲದೇ ಕಿರಣ ಸಾಯನಾಯ್ಕ ಅಭಯ ಪಾಟೀಲರ ವಿರುದ್ಧ ಹಿಂದೆ ನಡೆದ ವಿಧಾನಸಭೆ ಚುನಾವಣೆಗೆ ನಿಂತು ಹೀನಾಯವಾಗಿ ಸೋತಿದ್ದರು. ಅಂತಹವರನ್ನು ಸೋಲಿಸಿದ ಕೀರ್ತಿ ವಾಣಿ ಜೋಶಿ ಅವರಿಗಿದೆ.
ಇನ್ನೂ ಸಾರಿಕಾ ಪಾಟೀಲ ಬಿಜೆಪಿಯ ಹಳೆಯ ಕಾರ್ಯಕರ್ತರು. ಹೀಗಾಗಿ ಇಬ್ಬರ ನಡುವೆ ಯಾರು ಮೇಯರ್ ಆಗ್ತಾರೆ ಎನ್ನುವ ಕುತೂಹಲಕ್ಕೆ ಫೆಬ್ರುವರಿ 6 ರಂದು ತೆರೆ ಬಿಳಲಿದೆ.