ದೆಹಲಿ :
ಕೆಲವೇ ತಿಂಗಳುಗಳಲ್ಲಿ ದೇಶದ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಮತ್ತೆ ಬಿಜೆಪಿ ಹವಣಿಸುತ್ತಿದೆ.
ಎಬಿಪಿ ನ್ಯೂಸ್ ಸಿ ವೋಟರ್ ಸಮೀಕ್ಷೆ ಪ್ರಕಟಿಸಿದೆ. ಗುಜರಾತ್ ನಲ್ಲಿ ಸತತ ಎರಡೂವರೆ ದಶಕಗಳಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೇ ಅಧಿಕಾರ ಪಡೆಯಲಿದೆ ಎಂದು ಸಮೀಕ್ಷೆ ಹೊರಬಿದ್ದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 135-143 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ನುಡಿದಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಗುರುತಿಸಲ್ಪಡಲಿದೆ. ಬಿಜೆಪಿ ಒಂದೇ 37-45 ಶಾಸಕರ ಬಲವನ್ನು ಪಡೆಯಲಿದೆ. ಕಾಂಗ್ರೆಸ್ ಕೇವಲ 21-29 ಸ್ಥಾನ ಪಡೆಯುವ ಸಮೀಕ್ಷೆ ಹೊರಬಿದ್ದಿದೆ.
ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷ ಬಿಜೆಪಿಯನ್ನು ಸೋಲಿಸಲು ಭಾರಿ ಪ್ರಯತ್ನ ನಡೆಸಿದೆ.ಆದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತವರಿನಲ್ಲಿ ಆಮ್ ಆದ್ಮಿ ನಾಯಕ ಕೇಜ್ರಿವಾಲ್ ಅವರ ಆಟ ಈ ಬಾರಿ ನಡೆಯುವುದು ಬಹುತೇಕ ಕಡಿಮೆ ಎನಿಸುವ ಸಮೀಕ್ಷೆ ಹೊರಬಿದ್ದಿದೆ.