ಬೆಳಗಾವಿ ಜಿಲ್ಲೆಯ ಎಲ್ಲ ಪುರಸಭೆ, ನಗರಸಭೆಗಳ ಜಾಹಿರಾತು ಬಿಲ್ಲುಗಳ ಸಂದಾಯ ಪರಿಸ್ಥಿತಿ ಹೇಳತೀರದು. ರಾಮದುರ್ಗ, ಖಾನಾಪುರ,ಚಿಕ್ಕೋಡಿ, ರಾಯಬಾಗ, ಕುಡಚಿ
ಪ.ಪಂ. , ಮೂಡಲಗಿ ಪುರಸಭೆಗಳ ಬಿಲ್ ಬಾಕಿ ಇದ್ದರೂ ಕೊಡದೇ ಸತಾಯಿಸುತ್ತಿರುವುದು ಯಾಕೆ ಎನ್ನುವುದು ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಮೂಡಲಗಿ : ಮೂಡಲಗಿ ತಾಲೂಕು ಅಂತ ಘೋಷಣೆಯಾಗಿ ಹಲವು ವರ್ಷಗಳೇ ಕಳೆದರೂ ಅಧಿಕಾರಿಗಳು ಮಾತ್ರ ಜನರ ಕೈ ಸಿಗುತ್ತಿಲ್ಲ……
ಪುರಸಭೆಯಲ್ಲಿ ಸಾರ್ವಜನಿಕರ ಒಂದು ಕೆಲಸ ಆಗಬೇಕಾದ್ರೆ ಕನಿಷ್ಠ 15 ದಿನವಾದರೂ ಬೇಕು.ಇಂತಹ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಯಾವಾಗ ಮುಕ್ತಿ ಸಿಗೋದು…..ಇಂಜಿನಿಯರ್ ಇದ್ರೆ ಮುಖ್ಯಾಧಿಕಾರಿ ಇರಲ್ಲ……ಮುಖ್ಯಾಧಿಕಾರಿ ಇದ್ರೆ ಇಂಜಿನಿಯರ್ ಇರಲ್ಲ. ಇವರಿಬ್ಬರು ಇದ್ದರೂ ಸಿಬ್ಬಂದಿ ಇರಲ್ಲ. ಎಂತ ಪುರಸಭೆ. ಎಂತ ಆಡಳಿತ….ಮುಖ್ಯಾಧಿಕಾರಿಗಳಿಗೆ ಇಂತಹ ಸಮಸ್ಯೆ ಹೇಳಿದ್ರೆ ಹಂ…ಹಂ…ಇದು ಬಿಟ್ಟು ಬೇರೇನೂ ಇಲ್ಲ…ಗುತ್ತಿಗೆ ಆಧಾರದ ನೌಕರನಿಗೆ ಕಾಲ್ ಮಾಡಿದ್ರು ಬ್ಯುಸಿ ಇಂದು ನಾಳೆ ಅಂತ ಎರಡೂ ವರ್ಷವಾಯಿತು.
ಪತ್ರಕರ್ತರಿಗೆ ಹೀಗೆ ಇನ್ನೂ ಸಾಮಾನ್ಯ ಜನರ ಪರಸ್ಥಿತಿ ಏನು..?ಪುರಸಭೆಯ ಇಂಜಿನಿಯರ್ ಪುಲ್ ಚಾರ್ಜ್ ಗುತ್ತಿಗೆ ಆಧಾರದ ನೌಕರನೇ ತೆಗೆದುಕೊಂಡಂತಿದೆ….ಇಲ್ಲಿಯ ಪುರಸಭೆ ಸದಸ್ಯರಂತೂ ನಮಗ್ಯಾಕೆ ಬೇಕು ಅಂತ ಮೌನವಾಗಿದ್ಧಾರೆ…..
ಪುರಸಭೆಯಲ್ಲಿ ನಡೆಯುವಂತ ಟೆಂಡರ್ ಗಳು ಮಾತ್ರ ಬೇಗ ಬೇಗನೇ ಆಗುತ್ತವೆ. ಉಳಿದೆಲ್ಲವೂ ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿವೆ…