ಬೆಳಗಾವಿ :
ಚಡ್ಡಿ ಗಟ್ಟಿ ಇದ್ದವರಿಗೆ ಕೈ ಪಕ್ಷದ ಟಿಕೆಟ್. ಹೀಗೆಂದು ತಮ್ಮ ಪಕ್ಷದ ಟಿಕೆಟ್ ಬಗ್ಗೆ ಮಾತನಾಡಿದವರು ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಸತೀಶ ಜಾರಕಿಹೊಳಿ.
ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನೊಂದು ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆಯಾಗಲಿದೆ ಎಂದು ತಿಳಿಸಿದರು.
ಇಲ್ಲಿನ ಪಕ್ಷದ ಸ್ಥಿತಿ ಗಮನಿಸಲು ರಣದೀಪ ಸುರ್ಜೆವಾಲಾ ಬಂದಿದ್ದಾರೆ. ಪಕ್ಷದಲ್ಲಿ ಅನೇಕ ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದರೆ ಹಂಚಿ ಊಟ ಮಾಡಬಹುದು. ಟಿಕೆಟ್ ಘೋಷಣೆ ನಂತರ ಕೆಲವರು ಹೋಗುತ್ತಾರೆ. ಅದು ಗೊತ್ತಿದೆ. ಅಂಥವರ ಬಗ್ಗೆ ಸಹ ನಾವು ಮಾರ್ಕ್ ಮಾಡಿ ಇಟ್ಟಿದ್ದೇವೆ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ಮಾರ್ಗದರ್ಶನ ಮಾಡಿದರು.