ಬೆಳಗಾವಿ: ಹಲ್ಲೆಗೆ ಒಳಗಾದ ರಾಜಕೀಯ ನಾಯಕರೊಬ್ಬರು ತಮ್ಮದೇ ಪಕ್ಷದ ನಾಯಕರು ಮತ್ತು ನಾಯಕಿಯರ ನಡುವೆ ಅನೈತಿಕ ಸಂಬಂಧ ಜೋಡಿಸಿ ಮಾತಾಡಿದ್ದು ಎನ್ನಲಾದ, ಅವರ ಧ್ವನಿ ಹೋಲಿಕೆಯ ಆಡಿಯೋ ಈಗ ಬ್ಲಾಸ್ಟ್ ಆಗಿ ಹೊರಬಿದ್ದಿದೆ.
ಮಾಜಿ ಪ್ರಭಾವಿ ನಗರ ಸೇವಕರೊಬ್ಬರೊಂದಿಗೆ ಮಾತನಾಡಿರುವ ಆಡಿಯೋ ಅಸಲಿಯತ್ತು ತಿಳಿದು ಬರಬೇಕಿದೆ.
ಫೋನ್ ಸಂಭಾಷಣೆಯಲ್ಲಿ ತಮ್ಮಪಕ್ಷದ ಮಾಜಿ ಸಚಿವ ಮತ್ತು ಪ್ರಮುಖ ನಾಯಕಿಯ ನಡುವೆ ಅನೈತಿಕ ವ್ಯವಹಾರ ಜೋಡಿಸಿ ಅದನ್ನು ಪ್ರಚುರಪಡಿಸಿರುವ ಈ ನಾಯಕನನ್ನು ಹೋಲುವ ಧ್ವನಿಯನ್ನು ಆಡಿಯೋದಲ್ಲಿ ಕೇಳಬಹುದಾಗಿದೆ. ಇನ್ನೊಬ್ಬ ಪ್ರಮುಖ ಹಾಗೂ ಉತ್ತರ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದ ನಾಯಕನ ಹೆಸರು ಹೇಳಿ. ನಾನು ಆ ಮಹಿಳೆಯ ಚಟುವಟಿಕೆ ಕಣ್ಣಾರೆ ಗಮನಿಸಿದ್ದೇನೆ, ಬೆಂಗಳೂರಲ್ಲಿ ಮೂರೆ ಜನ ಕುಳಿತಿದ್ದು ನೋಡಿದ್ದೇನೆ ಎಂದು ಫೋನ್ ಸಂಭಾಷಣೆಯಲ್ಲಿ ಹೇಳಿದ್ದಾನೆ. …. ದೊಡ್ಡದೊಡ್ಡವರ ಲಫಡಾ ನಮಗೇಕೆ ಎಂದೂ ಸಹಾ ಸಂಭಾಷಣೆಯ ಕೊನೆಯಾರ್ಧದಲ್ಲಿ ನಕ್ಕು ಮುಗಿಸಲೆತ್ನಿಸಿದ್ದಾನೆ. ಮಾಜಿ ಸಚಿವ, ಉತ್ತರ ಕ್ಷೇತ್ರದ ಮಾಜಿ ಟಿಕೇಟ್ ಆಕಾಂಕ್ಷಿಯಾಗಿದ್ದ ನಾಯಕ, ಬೆಳಗಾವಿಯ ಮತ್ತೊಬ್ಬ ಮಾಜಿ ಶಾಸಕ ಸೇರಿ ಹಲವರನ್ನು ಹೀಯಾಳಿಸಿರುವುದನ್ನು ಹೊರಬಿದ್ದಿರುವ ಆಡಿಯೋದಲ್ಲಿ ಕೇಳಬಹುದು. ರಾಷ್ಟ್ರೀಯ ಪಕ್ಷದ ಆಂತರಿಕ ವ್ಯವಹಾರ ಒಂದೂ ಸರಿ ಇಲ್ಲ ಎನ್ನುವುದು ಮಾತ್ರ ಇದರಿಂದ ಮನದಟ್ಟಾಗಿದೆ. ಇದು ಎರಡು ದಿನದಿಂದ ಬೆಳಗಾವಿಯಲ್ಲಿ ನಡೆದಿರುವ ಪೊಲೀಸ್ ಠಾಣಾ ದೂರು ಜೊಡುವ ಬಗೆಗಿನ ರಾಜಕೀಯ ಪ್ರಕರಣವನ್ನು ಮತ್ತೊಂದು ದಿಕ್ಕಿನ ಎಳೆತಕ್ಕೆ ಕೊಂಡೊಯ್ಯಲಿದೆ ಎಂಬ ಗುಸುಗುಸು ಹಬ್ಬಿದೆ..