ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಕೇಂದ್ರ ಬಜೆಟ್ 2025-26 ಅನ್ನು ಮಂಡಿಸಿದರು, ಕೃಷಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು), ಹೂಡಿಕೆ ಮತ್ತು ರಫ್ತಿಗೆ ಒತ್ತು ನೀಡುವ ಭಾರತದ ಮುಂದುವರಿದ ಆರ್ಥಿಕ ವಿಸ್ತರಣೆಗೆ ಮಾರ್ಗಸೂಚಿಯನ್ನು ಹೊರತಂದಿದ್ದಾರೆ.
ಬಜೆಟ್ನಲ್ಲಿ ಕೆಲವು ವಸ್ತುಗಳಿಗೆ ತೆರಿಗೆ ಕಡಿತದ ಪ್ರಸ್ತಾಪ ಮಾಡಲಾಗಿದೆ. ಇದರಿಂದ ಕೆಲವು ವಸ್ತುಗಳು ಅಗ್ಗವಾಗುತ್ತವೆ, ಆದರೆ ಕೆಲವು ವಸ್ತುಗಳಿಗೆ ಹೊಸದಾಗಿ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ಜೀವರಕ್ಷಕ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕದ ವಿನಾಯಿತಿ ಮಾಡಲು ಪ್ರಸ್ತಾಪಿಸಿದ್ದಾರೆ. ಯಾವುದು ಅಗ್ಗವಾಗಿದೆ ಮತ್ತು ಯಾವುದು ದುಬಾರಿಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಯಾವುದು ಅಗ್ಗ..?
36 ಜೀವ ಉಳಿಸುವ ಔಷಧಗಳ ಮೇಲಿನ ಟ್ಯಾಕ್ಸ್ ಇಳಿಕೆ
ಎಲೆಕ್ಟ್ರಿಕ್ ವಾಹನಗಳ ಮೇಲಿನ ಟ್ಯಾಕ್ಸ್ ಇಳಿಕೆ
ಇವಿ ಬ್ಯಾಟರಿಗಳ ಮೇಲಿನ ತೆರಿಗೆ ಇಳಿಕೆ
ಎಲ್ಇಡಿ ಟಿವಿಗಳ ಮೇಲಿನ ಸುಂಕ ಇಳಿತ
ಕ್ಯಾನ್ಸರ್ ಔಷಧಗಳ ಮೆಲಿನ ತೆರಿಗೆ ಇಳಿಕೆ
ಮೊಬೈಲ್ ಮೇಲಿನ ತೆರಿಗೆ ಇಳಿಕೆ
ಸ್ವದೇಶಿ ಬಟ್ಟೆಗಳ ಮೇಲಿನ ಟ್ಯಾಕ್ಸ್ ಇಳಿಕೆ
ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ
ಹೆಪ್ಪುಗಟ್ಟಿದ ಮೀನಿನ ವಹಿವಾಟಿನ ಮೇಲಿನ ತೆರಿಗೆ ಕಡಿತ
ಮೀನಿನ ಪ್ಲೇಟಿನ ಮೇಲಿನ ತೆರಿಗೆ ಇಳಿಕೆ
ಲಿಥಿಯಂ-ಐಯಾನ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ, ಸತು ಸೇರಿದಂತೆ ನಿರ್ಣಾಯಕ 12 ಖನಿಜಗಳ ಮೇಲಿನ ತೆರಿಗೆ ಕಡಿತ
ಓಪನ್ ಸೆಲ್ ಮೇಲಿನ ತೆರಿಗೆ ಇಳಿಕೆ
ತೇವಭರಿತ ನೀಲಿ ಚರ್ಮದ ಮೇಲಿನ ಕಸ್ಟಮ್ಸ್ ಸಂಪೂರ್ಣ ಇಳಿಕೆ
ಇಂಟರ್ನೆಟ್ ಸ್ವಿಚ್ ಮೇಲಿನ ತೆರಿಗೆ ಇಳಿಕೆ
ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್ 10ವರ್ಷದ ವರೆಗೆ ವಿನಾಯತಿ
ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್ ಮೇಲಿನ ಸುಂಕ ಇಳಿಕೆ
ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ಸುಂಕ ಇಳಿಕೆ
ಸಾಗರ ಉತ್ಪನ್ನಗಳ ಸುಂಕ ಇಳಿಕೆ
ಯಾವುದು ತುಟ್ಟಿ…
ಹೆಣೆದ ಬಟ್ಟೆಗಳ ಮೇಲೆ ತೆರಿಗೆ ಹೆಚ್ಚಳ
ಅಲ್ಕೋಹಾಲ್ ಮೇಲಿನ ಸುಂಕ ಏರಿಕೆ
ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ ಹೆಚ್ಚಳ
ತಂಬಾಕು ಪದಾರ್ಥಗಳ ಮೇಲಿನ ತೆರಿಗೆ ಹೆಚ್ಚಳ
ಟೆಲಿಕಾಂ ಉಪಕರಣಗಳ ಮೇಲಿನ ತೆರಿಗೆ ಹೆಚ್ಚಳ
ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಹೆಚ್ಚಳ
ವಿಮಾನ ಇಂಧನದ ಮೇಲಿನ ತೆರಿಗೆ ಹೆಚ್ಚಳ.