ಬೆಳಗಾವಿ: ಕರ್ನಾಟಕ ಗಡಿ ಮತ್ತು ನದಿಗಳ ವಿವಾದಗಳ
ವಿಷಯಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಉಸ್ತುವಾರಿಯನ್ನಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನು ನೇಮಿಸಲಾಗಿದೆ.
ಈ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಿ, ಸಮಯೋಚಿತ ಅವಶ್ಯಕ ಕ್ರಮ ತೆಗೆದುಕೊಳ್ಳಲು ಸಚಿವರೊಬ್ಬರಿಗೆ ಜವಾಬ್ದಾರಿ ವಹಿಸಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ, ಪಾಟೀಲ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಗಡಿ ಉಸ್ತುವಾರಿ ಸಚಿವರಾಗಿ
ಎಚ್.ಕೆ.ಪಾಟೀಲ ನೇಮಕ:
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ಅಭಿನಂದನೆ
ಗಡಿಭಾಗದ ಕನ್ನಡ ಸಂಘಟನೆಗಳ ದೀರ್ಘ
ಕಾಲದ ಬೇಡಿಕೆಯಾಗಿದ್ದ ಗಡಿ ಉಸ್ತುವಾರಿ
ಸಚಿವರ ನೇಮಕವಾಗಿದ್ದು ಹಿರಿಯ
ಸಚಿವ ಎಚ್.ಕೆ.ಪಾಟೀಲ
ಅವರನ್ನು ಗಡಿ ಹಾಗೂ ಜಲ ವಿವಾದಗಳ
ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
2013 ರಲ್ಲಿ ಸಿದ್ದರಾಮಯ್ಯ
ಅವರ ಸರಕಾರ ಅಧಿಕಾರಕ್ಕೆ ಬಂದ ನಂತರ ಎಚ್.ಕೆ.ಪಾಟೀಲ ಅವರನ್ನು
ಗಡಿ ಉಸ್ತುವಾರಿ ಸಚಿವರನ್ನಾಗಿ
ನೇಮಿಸಲಾಗಿತ್ತು. 2018 ರ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರಕಾರ
ಗಡಿ ಉಸ್ತುವಾರಿ ಸಚಿವರನ್ನು
ನೇಮಿಸಿರಲಿಲ್ಲ.
ಮಹಾರಾಷ್ಟ್ರ ಸರಕಾರವು
ಗಡಿವಿವಾದ ಸಂಬಂಧ ಇಬ್ಬರೂ ಉಸ್ತುವಾರಿ ಸಚಿವರನ್ನು ಇತ್ತೀಚೆಗೆ ನೇಮಿಸಿತ್ತು.
ಎಚ್.ಕೆ.ಪಾಟೀಲ ಅವರ ನೇಮಕ ಆದೇಶಕ್ಕಾಗಿ
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿಯು ಮುಖ್ಯಮಂತ್ರಿ
ಸಿದ್ದರಾಮಯ್ಯ ಮತ್ತು ಎಚ್.ಕೆ.
ಪಾಟೀಲರನ್ನು ಅಭಿನಂದಿಸಿದೆ.
ಈ ಕುರಿತು ಹೇಳಿಕೆ ನೀಡಿದ
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಶೀಘ್ರವೇ ಗಡಿ
ಉಸ್ತುವಾರಿ ಸಚಿವರು ಬೆಳಗಾವಿಗೆ ಭೇಟಿ ನೀಡಬೇಕೆಂದು ಕೋರಿದ್ದಾರೆ.