ಹಾವೇರಿ: ಸಿನಿಮಾ ನೋಡಲು ಬೆಂಗಳೂರಿನ ಜಿ.ಟಿ. ಮಾಲ್ಗೆ ಹೋಗಿದ್ದ ನಮ್ಮ ತಂದೆಯನ್ನು ಪಂಚೆ ಧರಿಸಿದ್ದಾರೆಂಬ ಕಾರಣಕ್ಕೆ ಸಿಬ್ಬಂದಿ ಒಳಗೆ ಬಿಟ್ಟಿಲ್ಲ. ಈ ಅವಮಾನವನ್ನು ನಾವು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ನಾವೂ ಮಾಲ್ ಕಟ್ಟಿಸಿ, ಅದಕ್ಕೆ ಅಪ್ಪನ ಹೆಸರಿಡುತ್ತೇವೆ ಎಂದು ರೈತ ಫಕೀರಪ್ಪ ಅವರ ಮಕ್ಕಳು ಹೇಳಿದರು. ರಾಣೆಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಅಪ್ಪ ರೈತ. ಮಾಲ್ ಒಳಗೆ ಬಿಡಲಿಲ್ಲವೆಂಬ ವಿಷಯ ತಿಳಿದು ನಮಗೆ ನೋವಾಯಿತು. ಪ್ರತಿಯೊಬ್ಬ ರೈತನಿಗೆ ನಾವು ಸಲಾಂ ಹೇಳಬೇಕು. ಬಟ್ಟೆ ನೋಡಿ ಅಳೆಯಬಾರದು. ಅವಮಾನವಾದ ಮಾಲ್ನಲ್ಲಿಯೇ ಅಪ್ಪನಿಗೆ ಮರುದಿನ ಸನ್ಮಾನವಾಗಿದೆ. ನಮ್ಮ ಅಪ್ಪನಿಗೆ ಆಗಿರುವ ಅವಮಾನ ಸಹಿಸಲಾರೆವು. ಭವಿಷ್ಯದಲ್ಲಿ ನಾವೇ ಸ್ವತಃ ಮಾಲ್ ಕಟ್ಟುವುದಾಗಿ ತಿಳಿಸಿದರು.
ಮಾಲ್ ಕಟ್ಟುತ್ತೇವೆ : ಪ್ರತಿಜ್ಞೆಗೈದ ಮಕ್ಕಳು
