ಬೆಳಗಾವಿ: ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸ್ನೇಹಮ್ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದರಲ್ಲಿ ಸದ್ಯಕ್ಕೆ ಒಬ್ಬರು ಮೃತಪಟ್ಟಿರುವ ಮಾಹಿತಿ ಇದ್ದು, ಹಲವರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ ಈ ಕಂಪನಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಕಂಪನಿಯಲ್ಲಿ ಸುಮಾರು 20 ರಷ್ಟು ಜನ ಇದ್ದರು ಎನ್ನಲಾಗಿದೆ. ಕಂಪನಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಒಳಗೆ ಇದ್ದವರ ಪೈಕಿ ಹಲವರು ಹೊರಗೆ ಓಡಿ ಬಂದು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡಿರುವವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕಂಪನಿಯಲ್ಲಿ ರಾತ್ರಿ ಸುಮಾರಿಗೆ ಬೆಂಕಿ ಅನಾಹುತ ನಡೆದಿದ್ದು ಸಂಭವಿಸಿರುವ ಹಾನಿ ಬಗ್ಗೆ ಮಾಹಿತಿ ಲಭಿಸಿಲ್ಲ. ಆದರೆ, ತಕ್ಷಣ ಆಗಮಿಸಿರುವ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಬೆಳಗಾವಿಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡ ಇದೀಗ ಸ್ಥಳದಲ್ಲೇ ಮೊಕ್ಕಾಂ ಹೂಡಿದೆ. ಸ್ಥಳೀಯರು ಸೇರಿದಂತೆ ನಮ್ಮ ಪ್ರತಿನಿಧಿ ಘಟನಾ ಸ್ಥಳದಿಂದ ಜನ ಜೀವಾಳಕ್ಕೆ ಮಾಹಿತಿ ನೀಡಿದ್ದಾರೆ