ನಿಪ್ಪಾಣಿ :
ಕನಸುಗಳು ದೊಡ್ಡದಾಗಿರಲಿ ಅವು ನನಸಾಗಲು ಸಂಯಮವಿರಲಿ. ಪ್ರತಿಭೆಗೆ ದೊರೆಯಬೇಕಾದ ಪುರಸ್ಕಾರಕ್ಕೆ ಕಾಯಬೇಕು. ಕಾರಣ ಇಂದಿನ ಯುವ ಪೀಳಿಗೆಗೆ ಭೋಗದ ಜಗತ್ತಿನಲ್ಲಿ ಯೋಗದ ಬೀಜ ಬಿತ್ತಿ; ತ್ಯಾಗದ ಫಲ ಬೆಳೆದ ವಿವೇಕಾನಂದರ ಆದರ್ಶ ಬದುಕು ಮಾದರಿಯಾಗಬೇಕು. ಎಂದು ವಡೇರಹಟ್ಟಿ(ಗೋಕಾಕ)ಯ ಅಂಬಾದರ್ಶನ ಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ನಾರಾಯಣ ಶರಣರು ಅಭಿಪ್ರಾಯ ಪಟ್ಟರು.
ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಗುರುವಾರ ಮಹಾವಿದ್ಯಾಲಯದ ಎನ್.ಎಸ್.ಎಸ್. ಎನ್.ಸಿ.ಸಿ. ಆರ್.ಆರ್.ಸಿ. ಮತ್ತು ವಾಯ್.ಆರ್.ಸಿ. ಜಂಟಿಯಾಗಿ ಏರ್ಪಡಿಸಿದ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅದ್ಭುತ ಓದು ಮತ್ತು ಅದರ ಆಚರಣೆ ಇವೆರಡನ್ನೂ ನಾವು ವಿವೇಕಾನಂದರಿಂದ ಕಲಿಯಬೇಕು. ಅವರೇ ಹೇಳಿದಂತೆ ಯುವಪೀಳಿಗೆಗೆ ಗುರಿ ಸ್ಪಷ್ಟವಾಗಿರಬೇಕು, ದಾರಿ ಸಮರ್ಪಕವಾಗಿರಬೇಕು ಮತ್ತು ಬಹುಮುಖ್ಯವಾಗಿ ಆ ದಾರಿಗೆ ಸಮರ್ಥನಾಗಿರಬೇಕು. ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿನಿಯಾದ ಲಕ್ಷ್ಮೀ ಮಂಟೂರ ಮತ್ತು ಆರತಿ ದಿವಟೆ ವಿವೇಕಾನಂದರ ಕುರಿತು ಮಾತನಾಡಿದರು. ಪ.ಪೂ.ಪ್ರಾಚಾರ್ಯ ಹೇಮಾ ಚಿಕ್ಕಮಠ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಎಮ್.ಎಮ್.ಹುರಳಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಡಾ.ಆರ್.ಜಿ.ಖರಾಬೆ, ಐಕ್ಯೂಎಸಿ ಸಂಯೋಜಕ ಡಾ. ಅತುಲ ಕಾಂಬಳೆ ಹಾಗೂ ಎನ್.ಸಿ.ಸಿ ಅಧಿಕಾರಿ ಸಿದ್ದು ಉದಗಟ್ಟಿ ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದರ ಭಾವ ಚಿತ್ರಕ್ಕೆ ಪುಪ್ಪಾರ್ಪಣೆ ನೆರವೇರಿಸಿದರು.
ಸಾಕ್ಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎನ್.ಎಸ್.ಎಸ್. ಅಧಿಕಾರಿ ಡಾ. ಎಸ್.ಎಮ್.ರಾಯಮಾನೆ ಸ್ವಾಗತಿಸಿದರು. ಆರ್.ಆರ್.ಸಿ. ಮತ್ತು ವೈ.ಆರ್.ಸಿ. ಸಂಯೋಜಕ ಡಾ. ಅಶೋಕ ರಾಠೋಡ ಪರಿಚಯಸಿದರು. ಸ್ವಯಂ ಸೇವಕರಾದ ಅನಿಲಕುಮಾರ ಹಡಕರ ಮತ್ತು ಧನಶ್ರೀ ಖೋತ ನಿರೂಪಿಸಿದರು. ಸ್ನೇಹಲ ಹಿರಿಕುಡೆ ವಂದಿಸಿದರು.