ಕುಂದಾಪುರ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಚಲನಚಿತ್ರ ನಟ ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಹಾಗೂ ಇತರರು ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಕೊಲ್ಲೂರಿಗೆ ಆಗಮಿಸಿ ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದಿದ್ದಾರೆ. ಗುರುವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಅವರು ದೇವಿ ದರ್ಶನ ಪಡೆದಿದ್ದಾರೆ. ದರ್ಶನ್ ಬಿಡುಗಡೆ ಸಂಬಂಧ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ನವ ಚಂಡಿಕಾ ಹೋಮ ನಡೆಯಲಿದೆ. ಯಾಗ ಶಾಲೆಯಲ್ಲಿ ಚಂಡಿಕಾ ಹೋಮ ನಡೆಯಲಿದ್ದು ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮೀ ಅವರು ದೇವರ ಬಳಿ ವಿಶೇಷವಾಗಿ ಪ್ರಾರ್ಥನೆ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಗಂಡನ ಬಿಡುಗಡೆಗೆ ಪ್ರಾರ್ಥಿಸಿ ದೇವಿ ದರ್ಶನ ಪಡೆದ ದರ್ಶನ್ ಪತ್ನಿ ವಿಜಯಲಕ್ಷ್ಮೀ : ವಿಶೇಷ ಪೂಜೆ ಸಲ್ಲಿಕೆ
