ಬೆಳಗಾವಿ :
ಹಾವೇರಿಯ ನೂತನ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆಯಾಗಿ ಬೆಳಗಾವಿಯ ವಿಜಯಲಕ್ಷ್ಮೀ ತೀರ್ಲಾಪುರ (ಪುಟ್ಟಿ) ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಖಾನಾಪುರ ಮರಾಠಾ ಮಂಡಲ ಪದವಿ ಮಹಾವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿರುವ ಅವರು ಉಪನ್ಯಾಸಕಿಯಾಗಿ 30 ವರ್ಷಗಳ ಅನುಭವ ಹೊಂದಿದ್ದಾರೆ.
ಇಂಗ್ಲಿಷ್ ಸಾಹಿತ್ಯದ ಜೊತೆ ಕನ್ನಡದಲ್ಲೂ ಆಳವಾಗಿ ಅಧ್ಯಯನ ಮಾಡಿರುವ ವಿಜಯಲಕ್ಷ್ಮೀ ಅವರು ಸಾಹಿತಿ ಹಾಗೂ ಕವಿಯಾಗಿ ಬೆಳಗಾವಿಯಲ್ಲಿ ಹೆಸರು ಮಾಡಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅವರು ತಮ್ಮ ಸುಂದರ ನಿರೂಪಣೆಗಳ ಮೂಲಕ ಚಿರಪರಿಚಿತರಾಗಿದ್ದಾರೆ.
ಅವರಿಗೆ ಇದೀಗ ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲ ಸಚಿವರ ಹುದ್ದೆ ಒಲಿದು ಬಂದಿದೆ.
ಪರಿಚಯ :
ಖಾನಾಪುರ ಮರಾಠ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕವಾಗಿ,ಧಾರ್ಮಿಕವಾಗಿ, ಸಾಹಿತ್ಯಕವಾಗಿ, ಸಾಮಾಜಿಕವಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಮತ್ತು ಸಮಾವೇಶಗಳನ್ನ ಸಂಘಟಿಸುತ್ತಾ ಪ್ರಾಧ್ಯಾಪಕ ಜೀವನವನ್ನು ಮುನ್ನಡೆಸುತ್ತಿದ್ದಾರೆ.
ತಮ್ಮ ಮಾಹಿತಿಗಾಗಿ
ಶೈಕ್ಷಣಿಕ ಸಾಧನೆಗಳು
1 ಅಧ್ಯಕ್ಷರು,
ಇಂಗ್ಲಿಷ್ ಬಿ ಓ ಈ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
2 ಅಧ್ಯಕ್ಷರು
ಇಂಗ್ಲೀಷ್ ಪ್ರಾಧ್ಯಾಪಕರ ಸಂಘ
ರಾಣಿ ಚೆನ್ನಮ್ಮ ಯೂನಿವರ್ಸಿಟಿ ಬೆಳಗಾವಿ
3 ಸದಸ್ಯರು ಬಿ ಓ ಎಸ್
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
4 ನ್ಯಾಕ್ ಕೋರ್ಡಿನೇಟರ್ ಆಗಿ ಮೂರು ಬಾರಿ ಸೇವೆ ಸಲ್ಲಿಸಿದ್ದು ಮಹಾವಿದ್ಯಾಲಯಕ್ಕೆ
ಸತತವಾಗಿ ಎ ಗ್ರೇಡ್ ಮತ್ತು ಎ ಪ್ಲಸ್ ಗ್ರೇಡ್ ತಂದ ಹೆಗ್ಗಳಿಕೆ
5 ಎನ್ಎಸ್ಎಸ್ ಅಧಿಕಾರಿಯಾಗಿ ಏಳು ವರ್ಷ ಸೇವೆ ಸಲ್ಲಿಕೆ ಈ ಸಂದರ್ಭದಲ್ಲಿ ದೇಶದ ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ್ ಪ್ರದೇಶ್, ಹಂಪಿ, ಧಾರವಾಡ ಮುಂತಾದ ಸ್ಥಳಗಳಲ್ಲಿ ಆಯೋಜಿಸಿದ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯದ ಮತ್ತು ಕರ್ನಾಟಕ ಯೂನಿವರ್ಸಿಟಿ ಧಾರವಾಡದ ಪ್ರತಿನಿಧಿಯಾಗಿ ಭಾಗವಹಿಸುವಿಕೆ.
6 2019ರಲ್ಲಿ ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶದಲ್ಲಿ ಪ್ರಮುಖ ಭಾಷಣಕಾರರು ಆಗಿ ಭಾಗವಹಿಸುವಿಕೆ.
7 ಕೇರಳ, ಮೇಘಾಲಯ, ತ್ರಿಪುರ, ಪುಣೆ ಗಳಲ್ಲಿ ಜರುಗಿದ ಅಂತರ್ರಾಷ್ಟ್ರೀಯ ವೆಬಿನರುಗಳಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೇನೆ.
7 ಮರಾಠ ಮಂಡಳ ಸಂಸ್ಥೆಯಲ್ಲಿ
ಜರುಗಿದ ವರ್ಲ್ಡ್ ರೆಕಾರ್ಡ್
ಮತ್ತು ಗಿನ್ನಿಸ್ ರೆಕಾರ್ಡಿನಲ್ಲಿ ನೇತೃತ್ವ ವಹಿಸಿದ್ದೇನೆ.
ಸಂದ ಪ್ರಶಸ್ತಿಗಳು
1 2011
ಕರ್ನಾಟಕ ಸರ್ಕಾರ ಕೊಡ ಮಾಡಲ್ಪಡುವ ರಾಜ್ಯ ಮಟ್ಟದ ಉತ್ತಮ ಎನ್ಎಸ್ಎಸ್ ಸಂಯೋಜನ ಅಧಿಕಾರಿ ಪ್ರಶಸ್ತಿ
2 2012
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು ಶಿಕ್ಷಣ ರತ್ನ ಪ್ರಶಸ್ತಿ
3 2009
ಅಮ್ಮ ಪ್ರಶಸ್ತಿ
ಉದಗಟ್ಟಿ ಸಂಸ್ಥಾನ ಬೆಳಗಾವಿ
4 2014
ಉತ್ತಮ ಶಿಕ್ಷಕ ಪ್ರಶಸ್ತಿ
ಲಯನ್ಸ್ ಕ್ಲಬ್ ಬೆಳಗಾವಿ
5 ಉತ್ತಮ ಎನ್ಎಸ್ಎಸ್ ಅಧಿಕಾರಿ ಪ್ರಶಸ್ತಿ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು
ರಾಣಿ ಚೆನ್ನಮ್ಮ ಯುನಿವರ್ಸಿಟಿ ಬೆಳಗಾವಿ
6 2019
ಉತ್ತಮ ಶಿಕ್ಷಕಿ ಪ್ರಶಸ್ತಿ
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬೆಳಗಾವಿ.
7 ಯೂಟ್ಯೂಬ್ ಪ್ರಶಸ್ತಿ ….
8. ರಾಷ್ಟ್ರಮಟ್ಟದ ಅಕ್ಕಮಹಾದೇವಿ ಪ್ರಶಸ್ತಿ
ನನ್ನ ಕವನ ಸಂಕಲನ “ಹನಿಸಿದಷ್ಟು ಪ್ರೀತಿ” ಪುಸ್ತಕಕ್ಕೆ ಅಖಿಲ ಭಾರತ ಕವಯಿತ್ರಿಯರ ಸಂಘ ಡೆಲ್ಲಿ ..
ಸ್ಥಾನಮಾನಗಳು
1 ಅಧ್ಯಕ್ಷರು
ಜಾಗತಿಕ ಲಿಂಗಾಯತ ಮಹಾಸಭೆ ಮಹಿಳಾ ಘಟಕ ಬೆಳಗಾವಿ
2 ಅಧ್ಯಕ್ಷರು
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಮಹಿಳಾ ಘಟಕ ಬೆಳಗಾವಿ
3 ಅಧ್ಯಕ್ಷರು
ಡಿಎಸ್ ಕರ್ಕಿ ಪ್ರತಿಷ್ಠಾನ ಮಹಿಳಾ ಘಟಕ ಬೆಳಗಾವಿ
4 ಉಪಾಧ್ಯಕ್ಷರು
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ
5 ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ, ಕಾರಂಜಿ ಮಠ ಮತ್ತು ಲಿಂಗಾಯತ ಮಹಿಳಾ ಸಮಾಜ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯ ಆಗಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ
6 ಸದಸ್ಯರು
ಅಖಿಲ ಭಾರತ ಕವಿಯತ್ರಿಯರ ಸಂಘ ಬೆಂಗಳೂರು
ಸಾಹಿತ್ಯ ಸೇವೆ
ಪ್ರಕಟಿತ ಪುಸ್ತಕಗಳು
1 ಜೋಸೆಫ್ ಕಾನ್ರಾಡ್
2 ನಕ್ಕಿತು ತಲೆದಿಂಬು
3 ಭಾವಗಳು ಬಿಕರಿಗಲ್ಲ
4 ಹನಿಸಿದಷ್ಟು ಪ್ರೀತಿ
5 ಲವ್ ಪಾಯಿಸಿ
6 Beneath the Masks
6 ರಾಷ್ಟ್ರೀಯ ಅಂತರಾಷ್ಟ್ರೀಯ ಸಮಾವೇಶಗಳಲ್ಲಿ ಮತ್ತು ನಿಯತಕಾಲಿಕೆ ಗಳಲ್ಲಿ ಅನೇಕ ಪ್ರಬಂಧಗಳು ಪ್ರಕಟಗೊಂಡಿವೆ.
7 ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲಿಷ್ ವ್ಯಾಕರಣವನ್ನು ಕಲಿಸುತ್ತಿದ್ದು ಮೂರು ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ಸ್ ಹೊಂದಿರುವ ಹೆಗ್ಗಳಿಕೆ.