ವಿಜಯಕುಮಾರ ಹೊಣಕೇರಿ ಎಡಿಸಿ ಆಗಿ ಅಧಿಕಾರ ಸ್ವೀಕಾರ.
ಬೆಳಗಾವಿ:ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿ ಹಿರಿಯ ಕೆಎಎಸ್ ಅಧಿಕಾರಿ ವಿಜಯಕುಮಾರ ಹೊನಕೇರಿ ಇಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೆಶಕರಾಗಿ, ಹುಬ್ಬಳ್ಳಿ ಕಿಮ್ಸ್ ವ್ಯವಸ್ಥಾಪಕರಾಗಿ ಹಾಗೂ ಹಲವು ಕಡೆ ಅಸಿಸ್ಟಂಟ್ ಕಮಿಷ್ನರ್ ಆಗಿ ವಿಜಯಕುಮಾರ ಆಡಳಿತದ ಅನುಭವ ಹೊಂದಿದ್ದಾರೆ.
ನೂತನ ಎಡಿಸಿ ಅವರನ್ನು ಸರಕಾರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಸ್ವಾಗತಿಸಿದ್ದಾರೆ.