ಸವದತ್ತಿ :
ಸವದತ್ತಿ ಪಟ್ಟಣದಲ್ಲಿ 27 ವಾರ್ಡ್ ಗಳು ಹಾಗೂ ಬೂತ್ ಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ವತಿಯಿಂದ ಬುಧವಾರ ನಡೆದ ವಿಜಯ ಸಂಕಲ್ಪ ಅಭಿಯಾನ ಯಶಸ್ವಿಗೊಂಡಿತು.
ಬೂತ್ ಮಜಬೂತ್ ಹೋಯತೋ ..ಹಮರಾ ವಿಜಯ ಗ್ಯಾರಂಟಿ…ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಶಯವನ್ನು ಈಡೇರಿಸಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು
ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದ ಭಿತ್ತಿ ಪತ್ರ, ಗೋಡೆ ಬರಹ, ಮನೆಯ ಗೋಡೆಗೆ ಬರಹ ಹಾಗೂ ವಾಹನಗಳಿಗೆ ಬಿಜೆಪಿಯ ಸಾಧನೆಗಳನ್ನು ಅಂಟಿಸಲಾಯಿತು.
ವಿಜಯ ಸಂಕಲ್ಪ ಅಭಿಯಾನ ಹಾಗೂ ಪಕ್ಷದ ಸಂಘಟನೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ತಿಳಿಸಲಾಯಿತು.
ಸವದತ್ತಿ ಯಲ್ಲಮ್ಮ ವಿಧಾನ ಸಭಾ ಕ್ಷೇತ್ರ ದಲ್ಲಿ ಪ್ರತಿಯೊಂದು ಬೂತ್ ದಲ್ಲಿ ಬೂತ್ ಅಧ್ಯಕ್ಷರು ಸಕ್ರಿಯವಾಗಿ ಪೇಜ್ ಪ್ರಮುಖರನ್ನು ನೇಮಕ ಮಾಡಿ ವಿಧಾನಸಭಾ ಚುನಾವಣೆಗೆ ಬಿಜೆಪಿಗೆ ಶಕ್ತಿ ತುಂಬಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರುದ್ರಣ್ಣ ಚಂದರಗಿ ತಿಳಿಸಿದರು.
ಸವದತ್ತಿ ವಿಧಾನಸಭಾ ಮತಕ್ಷೇತ್ರ ಬಿಜೆಪಿಯ ಭದ್ರಕೋಟೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಸವದತ್ತಿ ವಿಧಾನ ಸಭಾ ಕ್ಷೇತ್ರದ ವಿಸ್ತಾರಕರಾದ ಶಂಕರಗೌಡ ಪಾಟೀಲ ಅವರು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಪಕ್ಷ ಬೂತ್ ಮಟ್ಟದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಬಿಜೆಪಿ ಸಿದ್ದಾಂತವನ್ನು ಪ್ರತಿಯೊಬ್ಬ ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಎಲ್ಲಾ ಅಪೇಕ್ಷಿತರನ್ನು ಮತ್ತು ಹಿರಿಯ ಪಕ್ಷದ ಮುಖಂಡರನ್ನು ಒಗ್ಗೂಡಿಸಿಕೊಂಡು ಸವದತ್ತಿ ಮತಕ್ಷೇತ್ರದ ವಿಸ್ತಾರಕರಾದ ಶಂಕರಗೌಡ ಪಾಟೀಲ ಮತ್ತು ಮಂಡಲ ಅಧ್ಯಕ್ಷರಾದ ಚಂದ್ರಗಿ ಇವರಿಬ್ಬರು ಕೆಲಸದಲ್ಲಿ ಅತ್ಯಂತ ಶ್ರಮವಹಿಸಿ ಸಂಘಟನೆಯಲ್ಲಿ ತೊಡಗಿದ್ದಾರೆ.
ಬಿಜೆಪಿ ಸವದತ್ತಿ ಮಂಡಳ ಅಧ್ಯಕ್ಷ ಈರಣ್ಣ ಚಂದರಗಿ, ಜಿಲ್ಲಾ ಉಪಾಧ್ಯಕ್ಷ ರುದ್ರಣ್ಣ ಚಂದರಗಿ, ರತ್ನಕ್ಕಾ ಮಾಮನಿ, ವಿರುಪಾಕ್ಷ ಮಾಮನಿ, ಅಜಿತ ದೇಸಾಯಿ, ರಾಜು ಸಾಲಿಮಠ, ನಯನಾ ಭಸ್ಮೆ, ಬಿಜೆಪಿ ಹಿರಿಯ ಮುಖಂಡರು, ಯುವ ಮೋರ್ಚಾ ಕಾರ್ಯಕರ್ತರು , ಮಹಿಳಾ ಮೋರ್ಚಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.