ನವದೆಹಲಿ : ಮಂಗಳವಾರ ನಡೆದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳಿಂದ ಚಲಾಯಿಸಲಾದ 752 ಮಾನ್ಯ ಮತಗಳಲ್ಲಿ ಅವರು 452 ಮತಗಳನ್ನು ಪಡೆದರು.
ಅವರ ಪ್ರತಿಸ್ಪರ್ಧಿಯಾದ ವಿಪಕ್ಷ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಭ್ಯರ್ಥಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನಿರೀಕ್ಷೆಗಿಂತ ಕಡಿಮೆ ಅಂದರೆ 300 ಮತಗಳನ್ನು ಮಾತ್ರ ಗಳಿಸಿದರು.
ರಾಧಾಕೃಷ್ಣನ್ ಗೆಲ್ಲುತ್ತಾರೆ ಎಂಬುದರಲ್ಲಿ ಎಂದಿಗೂ ಸಂದೇಹವಿರಲಿಲ್ಲ; ಪಕ್ಷದ ನೇತೃತ್ವದ ಎನ್ಡಿಎ ಹಾಗೂ ಬೆಂಬಲಿತ ಪಕ್ಷಗಳ ಸಂಸದರ ಸಂಖ್ಯೆ ಹೆಚ್ಚಿತ್ತು. ಬಿಜೆಪಿ ನೇತೃತ್ವದ ನ್ಯಾಟೋಯಿನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 427 ಸಂಸದರನ್ನು ಹೊಂದಿದೆ, ಇದು ಚಲಾವಣೆಯಾದ 767 ಮತಗಳಲ್ಲಿ 15 ಅಮಾನ್ಯ ಮತಗಳನ್ನು ಹೊರತುಪಡಿಸಿದ ನಂತರ ಲೆಕ್ಕಹಾಕಲಾದ ಬಹುಮತ ಪಡೆಯಲು ಬೇಕಾದ 377 ಕ್ಕಿಂತ ಹೆಚ್ಚು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಎನ್ಡಿಎ ಅಭ್ಯರ್ಥಿ ಬೆಂಬಲಿಸಿದ ನಂತರ ಆದರೆ ಪಕ್ಷದ 11 ಮತಗಳನ್ನು ಸೇರಿಸಿದರೆ ಬಿಜೆಪಿ ಅಭ್ಯರ್ಥಿ ರಾಧಾಕೃಷ್ಣನ್ ಅವರು 438 ಗಳಿಸಬೇಕಿತ್ತು. ಆದರೆ ಅವರು ಹೆಚ್ಚುವರಿಯಾಗಿ
14 ಮತಗಳನ್ನು ಮತಗಳನ್ನು ಪಡೆದರು.
ಸಿ.ಪಿ.ರಾಧಾಕೃಷ್ಣನ್ ಅವರಿಗೆ 14 ಹೆಚ್ಚುವರಿ ಮತಗಳು ಬಂದಿವೆ. ವಿಪಕ್ಷಗಳ ಸಂಸದರು ಅಡ್ಡ ಮತದಾನ ಮಾಡಿದ್ದರಿಂದ ಬಂದಿರುವ ಸಾಧ್ಯತೆಯಿದೆ. ಅದು ವಿಪಕ್ಷಗಳಲ್ಲಿ ಅನೇಕರ ಹುಬ್ಬೇರಿಸುವಂತೆ ಮಾಡಿದೆ.
ವಿಪಕ್ಷದ ಅಭ್ಯರ್ಥಿ ನ್ಯಾಯಮೂರ್ತಿ ರೆಡ್ಡಿ ಕನಿಷ್ಠ 315 ಮತಗಳನ್ನು ಗಳಿಸಬೇಕಾಗಿತ್ತು, ಏಕೆಂದರೆ ಅದು ಇಂಡಿಯಾ ಮೈತ್ರಿಕೂಟ ಹಾಗೂ ಅದರ ಬೆಂಬಲಿತ ಪಕ್ಷಗಳ ಸಂಸದರ ಸಂಖ್ಯೆಯಾಗಿದೆ. ಎಎಪಿ ಅಧಿಕೃತವಾಗಿ ಇಂಡಿಯಾ ಮೈತ್ರಿಕೂಟದ ಭಾಗವಲ್ಲ. ಆದರೂ ನ್ಯಾಯಮೂರ್ತಿ ರೆಡ್ಡಿ ಆಮ್ ಆದ್ಮಿ ಪಕ್ಷದಿಂದ 12 ಮತಗಳನ್ನು ಪಡೆಯಬೇಕಿತ್ತು; ಯಾಕೆಂದರೆ ಅದು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗೆ ಮತ ಹಾಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅವರು 15 (ಒಟ್ಟಾರೆ 27) ಮತಗಳನ್ನು ಕಡಿಮೆ ಗಳಿಸಿದ್ದಾರೆ ಎಂಬುದನ್ನು ಬಿಜೆಪಿ ಎತ್ತಿ ತೋರಿಸಿದೆ.
ಕಾಂಗ್ರೆಸ್ ನಾಯಕ ಜೈರಾಮ ರಮೇಶ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ, ಅಮಿತ್ ಮಾಳವಿಯಾ, “ಎಲ್ಲ ಗದ್ದಲದ ಹೊರತಾಗಿಯೂ… ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕೇವಲ 300 ಮತಗಳನ್ನು ಗಳಿಸಿದರು, ಅವರು ಹೇಳಿದ್ದಕ್ಕಿಂತ 15 ಕಡಿಮೆ” ಎಂದು X ನಲ್ಲಿ ಪೋಸ್ಟ್ಮಾಡಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಂಸದರು ಅಡ್ಡ ಮತದಾನ ಮಾಡಿದ್ದಾರೆಯೇ?
ಈಗ ಎಎಪಿಯ 12 ಮತಗಳನ್ನು ಪಕ್ಕಕ್ಕಿಟ್ಟರೂ 15 ಇಂಡಿಯಾ (INDIA) ಮೈತ್ರಿಕೂಟದ ಮತಗಳು ಎಲ್ಲಿಗೆ ಹೋದವು ಎಂಬುದು ಪ್ರಶ್ನೆ.
ಕೆಲವು ಅಮಾನ್ಯವೆಂದು ಘೋಷಿಸಲ್ಪಟ್ಟಿರಬಹುದು. ಎಲ್ಲಾ ಇಂಡಿಯಾ ಮೈತ್ರಿಕೂಟದ ಎಲ್ಲ 15 ಮತಗಳನ್ನು ತಿರಸ್ಕರಿಸಲಾಗಿದೆ ಎಂಬುದು ಅಸಂಭವವಾಗಿದೆ.
ರಾಧಾಕೃಷ್ಣನ್ ಅವರ ಗೆಲುವಿನ ಅಂತರವು ಸ್ವತಂತ್ರ ಶಾಸಕರಂತಹ ಅಲಿಪ್ತ ಸಂಸದರ ಮತಗಳಿಂದ ಕೂಡಿದೆ ಎಂದು ಅದು ಬಲವಾಗಿ ಸೂಚಿಸುತ್ತದೆ.
ಇಂಡಿಯಾ ಮೈತ್ರಿಕೂಟದ ಮತಗಳು ಏಕೆ ಮುಖ್ಯವಾಗುತ್ತದೆ ಎಂದರೆ ಮುಂದಿನ ಕೆಲವು ತಿಂಗಳಲ್ಲಿಯೇ ವಿಶೇಷವಾಗಿ ಬಿಹಾರ ಚುನಾವಣೆಯು ಬರಲಿದೆ. ಹೀಗಾಗಿ ವಿಪಕ್ಷಗಳ ಮೈತ್ರಿಕೂಟದಲ್ಲಿ ಅಡ್ಡಮತದಾನ ಮಾಡಿದ್ದು ಯಾರು ಎಂಬುದು ಮುಖ್ಯವಾಗುತ್ತದೆ.
ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಸ್ಪಷ್ಟ ಉದ್ದೇಶದಿಂದ ಜುಲೈ 2023 ರಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾದಾಗಿನಿಂದ ವಿಪಕ್ಷಗಳ ಒಗ್ಗಟ್ಟು ಈಗಲೂ ಚರ್ಚೆಯಲ್ಲಿರುವ ವಿಷಯವೇ ಆಗಿದೆ.
ಉಪರಾಷ್ಟ್ರಪತಿ ಚುನಾವಣೆ ರಹಸ್ಯ ಮತದಾನದ ಮೂಲಕ ನಡೆದಿದ್ದರಿಂದ ಒಂದು ಪಕ್ಷ ಅಥವಾ ಮೈತ್ರಿಕೂಟದ ಸಂಸದರು ಪ್ರತಿಸ್ಪರ್ಧಿಗೆ ಮತ ಚಲಾಯಿಸುವುದರಿಂದ ಯಾವುದೇ ನಿರ್ಣಾಯಕ ವಿಶ್ಲೇಷಣೆಯನ್ನು ಕಷ್ಟಕರವಾಗಿಸುತ್ತದೆ.