ಮಂಗಳೂರು : ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ದಿನ ಹರತಾಳ (ಬಂದ್) ನಡೆಸುವಂತೆ ಕರೆ ಕೊಟ್ಟಿದೆ.
ವಿಶ್ವಹಿಂದೂ ಪರಿಷತ್ ಈ ಕರೆ ನೀಡಿದೆ.
ನಡುರಾತ್ರಿ ವೇಳೆಗೆ ಎಜೆ ಆಸ್ಪತ್ರೆಗೆ ಭೇಟಿ ನೀಡಿದ ವಿಹಿಂಪ ಮುಖಂಡ ಶರಣ್ ಪಂಪೈಲ್ ಕಾರ್ಯಕರ್ತರ ಆಕ್ರೋಶಕ್ಕೆ ಕಿವಿಯಾದರು. ಈ ವೇಳೆ, ಕೊಲೆ ಘಟನೆಯನ್ನು ಖಂಡಿಸಿ ಒಂದು ದಿನ ಹರತಾಳ ನಡೆಸಬೇಕೆಂದು ಸೇರಿದ್ದ ಒತ್ತಾಯಿಸಿದರು. ಕಾರ್ಯಕರ್ತರು ಬೇಡಿಕೆ ಇಟ್ಟರು.
ಇದರಂತೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶರಣ್ ಪಂಪೈಲ್, ಮೇ 2ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಮಾಡಲಾಗುವುದು. ಕೊಲೆ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದರು.