ಬೆಳಗಾವಿ:
ಜನಸಾಹಿತ್ಯ ಪೀಠದ ಅಧ್ಯಕ್ಷ, ನಿವೃತ್ತ ಮುಖ್ಯೋಪಾಧ್ಯಾಯ,
ಹಿರಿಯ ಪತ್ರಕರ್ತ, ಸಾಹಿತಿ, ಕವಿ ಹಾಗೂ ಬಹುಮುಖ ಪ್ರತಿಭಾ ಸಂಪನ್ನರಾಗಿದ್ದ ಪುಂಡಲೀಕ ಪಾಟೀಲ (88)ಶನಿವಾರ ನಿಧನರಾಗಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಅವರ ದೇಹದಾನ ಮಾಡಲಾಗುತ್ತಿದೆ.
ಜನಜೀವಾಳ ಸಂಸ್ಥಾಪಕ ಸಂಪಾದಕರಾಗಿದ್ದ ಬ.ಮ. ಏಳುಕೋಟಿ ಅವರು ಪುಂಡಲೀಕ ಪಾಟೀಲ ಅವರನ್ನು 1980 ರಲ್ಲಿ ಜನಸಾಹಿತ್ಯ ಪೀಠದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಬೀದಿ ನಾಟಕಗಳನ್ನು ಮಾಡಿ ಜಿಲ್ಲಾಡಳಿತ ಪ್ರಶಸ್ತಿ ಪಡೆದುಕೊಂಡಿದ್ದರು. 30 ಕ್ಕೂ ಹೆಚ್ಚು ಮಕ್ಕಳ ಸಾಹಿತ್ಯ ರಚಿಸಿದ್ದಾರೆ.
ಅವರ ನಿಧನಕ್ಕೆ ಜನ ಸಾಹಿತ್ಯ ಪೀಠ, ಸಾಹಿತಿಗಳು ಹಾಗೂ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.