ಇಂದೋರ್: ಮೂಲತಃ ಅಣ್ಣಿಗೇರಿಯವರಾದ ಸದ್ಯ ಇಂದೋರ್ ನಲ್ಲಿರುವ ಮಂಗಳೂರಿನ ಪ್ರತಿಷ್ಠಿತ ಭಾರತ್ ಗ್ರೂಪ್ ರೀಜನಲ್ ಮ್ಯಾನೇಜರ್ ವೀರೇಶ್ ಕೆಂಭಾವಿ ಅವರು ಶಾಸಕ ಕೋನರೆಡ್ಡಿ ಅವರಿಗೆ ಇಂದೋರ್ ಮಹಾನಗರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇಂದೋರ್ ಈಗ ಸ್ವಚ್ಛತೆಯಿಂದಾಗಿ ಇಡೀ ಭಾರತದ ಗಮನ ಸೆಳೆದಿದೆ. ಇಲ್ಲಿ ಸ್ವಚ್ಛತೆಗೆ ಸ್ಥಳೀಯ ಆಡಳಿತ ಕೈಗೊಂಡಿರುವ ಹಲವಾರು ಉಪಯುಕ್ತ ಮಾಹಿತಿಗಳನ್ನು ಅವರು ಶಾಸಕ ಕೋನರೆಡ್ಡಿ ಅವರಿಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಅಣ್ಣಿಗೇರಿಯನ್ನು ಇಂದೋರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವ ಶಾಸಕ ಕೋನರೆಡ್ಡಿ ಅವರ ಸಾಮಾಜಿಕ ಕಳಕಳಿಯನ್ನು ವೀರೇಶ್ ಕೆಂಭಾವಿ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾಲಕಾಲಕ್ಕೆ ಅಣ್ಣಿಗೇರಿಯ ಸ್ವಚ್ಛತೆಗೆ ಕೈಗೊಳ್ಳಬೇಕಾದ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಿ ನೀಡುವುದಾಗಿ ಅವರು ತಿಳಿಸಿದರು. ಇಂದೋರ್ ನಲ್ಲಿ ನಾಗರಿಕರು ಯಾವ ರೀತಿಯಾಗಿ ಸಾಮಾಜಿಕ ಕೆಲಸ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಬಗ್ಗೆ ಅವರು ಶಾಸಕರಿಗೆ ವಿವರಿಸಿ ಇಲ್ಲಿಯ ಜನ ಪ್ರತಿಯೊಂದು ಹಂತದಲ್ಲೂ ಸ್ವಚ್ಛತೆಗೆ ಒತ್ತು ನೀಡುತ್ತಿರುವ ಬಗ್ಗೆ ತಿಳಿಸಿದರು.

ಇಂದೋರ್ ಮಾದರಿಯಲ್ಲಿ ಅಣ್ಣಿಗೇರಿ ಸ್ವಚ್ಛ ನಗರಕ್ಕೆ ನಿರ್ಧಾರ:ತಿಂಗಳಲ್ಲಿ ಕಾಮಗಾರಿ ಆರಂಭ
ಅಣ್ಣಿಗೇರಿ: ಮಧ್ಯ ಪ್ರದೇಶದ ಇಂದೋರ್ ರಾಷ್ಟ್ರ ಮಟ್ಟದಲ್ಲಿ ಸ್ವಚ್ಛತೆಗೆ ಪ್ರಶಸ್ತಿ ಪಡೆದು ಮಾದರಿಯಾಗಿದ್ದು, ಅಣ್ಣಿಗೇರಿಯನ್ನು ಕೂಡ ಅದೇ ಮಾದರಿಯಲ್ಲಿ ಸ್ವಚ್ಛ ನಗರವಾಗಿಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಅವರು ಮಧ್ಯ ಪ್ರದೇಶದ ಇಂದೋರನ ನಗರಕ್ಕೆ ಅಣ್ಣಿಗೇರಿ ಪುರಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಅಧ್ಯಯನ ತಂಡದ ಕಚೇರಿಯ ಸಭಾಭವನದ ಸಭೆಯಲ್ಲಿ ಮಾತನಾಡಿ, ನವಲಗುಂದ ವಿಧಾನಸಭಾ ಕ್ಷೇತ್ರದ ಆಣ್ಣಿಗೇರಿ ಸಮಗ್ರ ಅಭಿವೃದ್ಧಿ ಕುರಿತು ಹಮ್ಮಿಕೊಳ್ಳಲಾದ ತರಬೇತಿ ಪ್ರವಾಸದಲ್ಲಿ ವೀಕ್ಷಿಸಿ ಮೂಲದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಸಂಗ್ರಹಣೆ ಬಗ್ಗೆ ಪ್ರತ್ಯಕ್ಷ ಸಾರ್ವಜನಿಕರೊಂದಿಗೆ ವಿಚಾರಿಸಿ ಅವರ ಅನುಭವಗಳನ್ನು ತಿಳಿದುಕೊಳ್ಳಲಾಯಿತು. ಹಾಗೂ ನಮ್ಮೊಂದಿಗೆ ಹಾಜರಿದ್ದು ಎಲ್ಲ ಉತ್ತಮ ಪದ್ಧತಿಗಳ ಬಗ್ಗೆ ವೀಕ್ಷಿಸಲಾಯಿತು.
ಬಯೋ ಗೋವರ್ಧನ್ ಸ್ಪಾಂಟ್ಗೆ ಭೇಟಿ 500 ರಿಂದ 550 ಟನ್ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವುದನ್ನು ವೀಕ್ಷಿಸಲಾಯಿತು. ಒಣ ಕಸ ವಿಲೇವಾರಿ ಘಟಕ್ಕೆ ತರಳ NEPRA Resources management Ltd ಇವರಿಂದ ಮಾಹಿತಿ ಪಡೆಯಲಾಯಿತು. ನಗರ ಪಾಲಿಕೆಯಿಂದ 20 intigrated com-mand control ಮಾಹಿತಿ ಪಡೆಯಲಾಯಿತು. ಇಂದೋರ ನಗರದ ಒಳ ಚರಂಡಿ ನೀರನ್ನು ಕುದ್ದೀಕರಣ ಮಾಡುವ STP ಘಟಕಕ್ಕೆ ಭೇಟಿ ನೀಡಿ ಇಲ್ಲಿನ 245 MLD ಸಾಮರ್ಥ್ಯದ ಪ್ಲಾಂಟ್ ಪ್ರದೇಶದಲ್ಲಿ ಹಾದು ಹೋಗುವ ಖಾನ ನದಿಗೆ ನಿವರ್ ಫ್ರಂಟ್ ಅಭಿವೃದ್ಧಿ ಪಡಿಸಿದ ಕಾಮಗಾರಿ
ಪುರಸಭೆ ಅಧ್ಯಕ್ಷ ಶಿವಾನಂದ ಬೆಳಪಾರ, ಉಪಾಧ್ಯಕ್ಷ ನಾಗಪ್ಪ ದಳವಾಯಿ, ಸ್ಥಾಯಿ ಸಮಿತಿ ಬೇರಮನರುಗಳಾದ ತಿಮ್ಮಣ್ಣ ಕೊರವರ, ನೀಲಪ್ಪ ಕುರಹಟ್ಟಿ ಅಮೀನಾಬೇಗಂ, ಸದಸ್ಯರುಗಳಾದ ಚಂದ್ರನಾಥ ನಾವಳ್ಳಿ, ಬಾಬಾಜಾನ ಮುಲ್ಲಾನವರ, ಅಮೃತಪ್ಪಾ ಗುರಿಕಾರ, ಹಸನಸಾಬ ಸುಂಕದ, ಅಮೃತೇಶ ಮೀಕಿ, ಶೋಭಾ ಗೊಲ್ಲರ, ಮೆಹಬೂಬಿ ನವಲಗುಂದ ವೀಣಾ ಭೋವಿ, ಬಸವಣ್ಣೆಪ್ಪ ದಿಡ್ಡಿ, ಗಂಗಾ ಕರೆಟ್ಟನವರ, ಪರವಿನಾನು ಬಸಾಪುರ, ಸುಜಾತಾ ಶಾನಭೋಗರ್, ಈಶ್ವರ ಕಾಳಪ್ಪನವರ, ಹಸನಸಾಬ ಗಡ್ಡದ ಮಹೇಶ ಪಲ್ಲೆದ, ಶಂಕ್ರಪ್ಪ ಕುರಿ, ಮಾರುತಿ, ಆಣ್ಣಿಗೇರಿ ಪುರಸಭೆಯ ಮುಖ್ಯಾಧಿಕಾರಿ ಗದ್ದಿಗೌಡರ, ಎಸ್.ಎಚ್. ನಾಶಿಪುಡಿ ಮುಂತಾದವರಿದ್ದರು.
ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಪಡೆದು ಬೆಣ್ಣೆ ಹಳ್ಳ ಆರತಿ ಅಭಿವೃದ್ಧಿ ಕಾಮಗಾರಿ ಮೆಟ್ಟಿಲು ಹಾಗೂ ಸ್ನಾನ ಮಾಡಲು 25 ಕೋಟಿ ರೂ. ಅನುದಾದಲ್ಲಿ ಆಧುನಿಕ ಪದ್ಧತಿಯಲ್ಲಿ ಕಾಮಗಾರಿಯನ್ನು ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಒಂದು ತಿಂಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದೇನೆ.-ಕೋನರೆಡ್ಡಿ, ಶಾಸಕರು
ಎಸ್.ಎಚ್. ಕೋನರಡ್ಡಿ, ಶಾಸಕ