ಬೆಳಗಾವಿ :
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೆಯನ್ನು ಸೆ.16 ಮತ್ತು 17 ರಂದು ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ.16 ರಂದು ಬೆಳಗ್ಗೆ 11:೦೦ ಗಂಟೆಗೆ ಶ್ರೀ ಬಸವೇಶ್ವರ ಪಲ್ಲಕ್ಕಿ ಮೆರವಣಿಗೆ ಉತ್ಸವ ಆಯೋಜಿಸಲಾಗಿದೆ. ನಂತರ ಮಧ್ಯಾಹ್ನ 3:೦೦ ಮಹಾಪ್ರಸಾದ ನಡೆಯಲಿದೆ.
ಸೆ. 17 ರಂದು ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗಳನ್ನು ಮಧ್ಯಾಹ್ನ 3:00 ಗಂಟೆಗೆ ಇಂಗಳಿ ಗ್ರಾಮದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಚಿಕ್ಕೋಡಿ ಕ್ಷೇತ್ರದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಅವರಿಂದ 51.000 ರೂಪಾಯಿ ಕಾಣಿಕೆ ನೀಡಲಿದ್ದಾರೆ. ಕೈ. ವಾ . ಪೈಲ್ವಾನ್ ಬಂಡು ಅಣ್ಣಾ ಬಸಲಿಂಗ ಕುಡಚೆ ಇವರ ಸ್ಮರಣಾರ್ಥ ಪೈಲ್ವಾನ್ ಸಂಜಯ ಗಣಪತಿ ಕುಡಚಿ ಹಾಗೂ ಇಂಗಳಿ ಗ್ರಾಮದ ಕುಡಚಿ ಪರಿವಾರದವರು ಒಂದು ಲಕ್ಷ ರೂಪಾಯಿ ಕಾಣಿಕೆಯಾಗಿ ನೀಡಿದ್ದಾರೆ.
ನವದೆಹಲಿಯ ಕರ್ನಾಟಕ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಚಿಕ್ಕೋಡಿ ಕ್ಷೇತ್ರದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ, ಕಾಗವಾಡ ಕ್ಷೇತ್ರದ ಶಾಸಕ ಭರಮಗೌಡ(ರಾಜು) ಕಾಗೆ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜಕೀಯ ಯುವ ಮುಖಂಡ ಉತ್ತಮ ಪಾಟೀಲ್ ಉಪಸ್ಥಿತರಿರುವರು.
ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಪಟುಗಳು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಇಂಗಳಿ ಗ್ರಾಮದ ಎಲ್ಲಾ ಗ್ರಾಮಸ್ಥರು ಸಕಲ ರೀತಿಯಲ್ಲೂ ಸಹಾಯ ಸಹಕಾರ ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.