ಬೆಳಗಾವಿ : ಖಾನಾಪುರ ತಾಲೂಕಿನ ಕಕ್ಕೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುರಪುರ ಕೆರವಾಡ ಗ್ರಾಮದ ಶ್ರೀ ಸೀಮಾದೇವಿ ಗಜಾನನ ಯುವಕ ಮಂಡಳಿ ವತಿಯಿಂದ ಖಾಲಿ ಚಕ್ಕಡಿ ಎಳೆಯುವ ಹಾಗೂ ಬೈಕ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಯಿತು.
ಪ್ರಥಮ ಬಹುಮಾನ ಶ್ರೀ ಸೀಮಾದೇವಿ ಗಜಾನನ ಯುವಕ ಮಂಡಳಿ ವತಿಯಿಂದ ನೀಡಲಾಯಿತು.
ಚಕ್ಕಡಿ ಎಳೆಯುವ ಸ್ಪರ್ಧೆ ವಿಜೇತರು : ಅಜ್ಜಪ್ಪ ಮಗದುಮ್ಮ(ಪ್ರ),
ಸಚಿನ ಅಂಬೋಜಿ(ದ್ವಿ), ವಿಜಯ ಶಹಾಬದಾರಿ(ತೃ)
ಬೈಕ್ ಸ್ಪರ್ಧೆ ವಿಜೇತರು :
ದಾನೇಶ್ವರ ತಾಳೆದಾರ (ಪ್ರ),
ಅಜ್ಜಪ್ಪ ಮಗದುಮ್ಮ(ದ್ವಿ), ಸಂದೀಪ ಮಗದುಮ್ಮ(ತೃ).
ದ್ವಿತೀಯ ಬಹುಮಾನವನ್ನು
ರೈಲ್ವೆ ಗುತ್ತಿಗೆದಾರ ಅಡಿಯಪ್ಪ ಅಮಾತೆ ಹಾಗೂ ಅಶೋಕ ನೀಡಿದರು
ತೃತೀಯ ಬಹುಮಾನವನ್ನು
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಆಪ್ತ ಸಹಾಯಕ ಹಾಗೂ ಬಿಜೆಪಿ ಯುವ ನಾಯಕ ಸಿದ್ದು ಪಾಟೀಲ ಹಾಗೂ ಯುವ ಪ್ರಮುಖ ಮಂಜು ಪಾಟೀಲ ನೀಡಿದರು.
ಸರಕಾರಿ ಪ್ರೌಢ ಶಾಲೆಯ ಅಧ್ಯಕ್ಷ ಹಾಗು ಕರವೇ ತಾಲೂಕು ಸಂಚಾಲಕ ಪರಸಪ್ಪ ಪಾಟೀಲ , ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಆಪ್ತ ಸಹಾಯಕ , ಹಾಗೂ ಬಿಜೆಪಿ ಯುವ ನಾಯಕ ಸರಕಾರಿ ಪ್ರೌಢ ಶಾಲೆಯ ಉಪಾಧ್ಯಕ್ಷ ಸಿದ್ದು ಪಾಟೀಲ ,ಮಂಜು ಪಾಟೀಲ ,ಆನಂದ ಪಾಟೀಲ ,ರೈಲ್ವೆ ಗುತ್ತಿಗೆದಾರ ಅಡಿಯಪ್ಪ ಅಮಾತೆ ಹಾಗೂ ಅಶೋಕ ಹಾಗೂ
ಶ್ರೀ ಸೀಮಾದೇವಿ ಗಜಾನನ ಯುವಕ ಮಂಡಳಿ ಕಮಿಟಿ ಸದಸ್ಯರಾದ ಮುತ್ತು ಹಲಕರಣಿ, ಶ್ರೀಧರ ಪಾಟೀಲ (ಚಿಕ್ಕೋಡಿ), ಸುನೀಲ ಚೌಗಲಾ, ಸಂಜು ಪಾಟೀಲ , ಗಣೇಶ ಹಲಸಿ, ಆನಂದ ಹುದಲಿ, ಸತೀಶ ಪೂಜೇರಿ, ಲಕ್ಷ್ಮಣ ಮಗದುಮ ,ರಾಘು ಹೊಸಟ್ಟಿಕರ, ಕೃತಿಕ್ ಪಾಟೀಲ , ಗ್ರಾಮದ ಯುವಕರು ಹಾಗೂ ಶ್ರೀ ಕೃಷ್ಣ ಯುವಕ ಮಂಡಲದವರು ಉಪಸ್ಥಿತರಿದ್ದರು.
ಸುರಪುರ ಕೆರವಾಡದಲ್ಲಿ ವಿವಿಧ ಸ್ಪರ್ಧೆ ಆಯೋಜನೆ
