ಮುಂಬೈ :
ಸರ್ಕಾರ ಭಾನುವಾರ ಹೊಸ ಅಭಿಯಾನ ಆರಂಭವಾಗಿದೆ. ದೂರವಾಣಿ ಕರೆ ಸ್ವೀಕರಿಸುವಾಗ ಹಲೋ ಎಂಬ ಬದಲು ವಂದೇ ಮಾತರಂ ಎನ್ನಬೇಕು ಎಂದು ಜನರಿಗೆ ಪ್ರೇರೇಪಣೆ ಮಾಡಲು ಅಭಿಯಾನ ಆರಂಭಿಸಿದೆ.
ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಟಿವಾರ್ ಈ ಬಗ್ಗೆ ಹೇಳಿಕೆ ನೀಡಿದ್ದು ಇನ್ನು ಮುಂದೆ ಹಲೋ ಎಂಬ ಬದಲು ವಂದೇ ಮಾತರಂ ಎಂದು ರಾಜ್ಯದ ನಾಗರಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಅರಿವು ಮೂಡಿಸಲು ಅಭಿಯಾನವನ್ನು ಕೈಗೊಳ್ಳಲಾಗಿದೆ. ದೂರವಾಣಿ ಕರೆ ಸ್ವೀಕರಿಸುವಾಗ ಜೈ ಶ್ರೀರಾಮ್, ಜೈ ಭೀಮ್ ಅಥವಾ ಅವರ ಪೋಷಕರ ಹೆಸರನ್ನು ಹೇಳಿದರೂ ನಮಗೆ ವಿರೋಧವಿಲ್ಲ. ಆದರೆ ಹಲೋ ಎಂದು ಕರೆಯುವುದನ್ನು ನಿಲ್ಲಿಸಬೇಕು. ಸರ್ಕಾರಿ ನೌಕರರ ಕಚೇರಿ ಅಥವಾ ವೈಯಕ್ತಿಕ ಮೊಬೈಲ್ ಕರೆಗಳಿಗೆ ಬರುವ ಕರೆಗಳನ್ನು ಸ್ವೀಕರಿಸುವಾಗ ಹಲೋ ಬದಲು ವಂದೇ ಮಾತರಂ ಎಂದು ಹೇಳಬೇಕು ಎಂಬ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ. ಹಲೋ ಪಾಶ್ಚಿಮಾತ್ಯ ಸಂಸ್ಕೃತಿ. ಈ ಪದಕ್ಕೆ ಅರ್ಥವಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.