ದೆಹಲಿ:
ರೈಲ್ವೆ ಸಚಿವಾಲಯ ಜೂನ್ 26ರಿಂದ ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಇನ್ನೂ ಐದು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಸೆಮಿ ಹೈಸ್ಪೀಡ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡುವ ನಿರೀಕ್ಷೆಯಿದೆ.
ಮುಂಬೈ-ಗೋವಾ, ಬೆಂಗಳೂರು-ಹುಬ್ಬಳ್ಳಿ, ಪಟ್ನಾ-ರಾಂಚಿ, ಭೋಪಾಲ್-ಇಂದೋರ್ ಮತ್ತು ಭೋಪಾಲ್-ಜಬಲ್ಪುರ ಮಾರ್ಗಗಳಲ್ಲಿ ಈ ಐದು ರೈಲುಗಳು ಸಂಚರಿಸಲಿವೆ.
ಒಡಿಶಾದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು ಮುಂಬೈ-ಗೋವಾ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರದ ಪ್ರಾರಂಭವನ್ನು ರದ್ದುಗೊಳಿಸಿತ್ತು. ವಂದೇ ಭಾರತ್ನ ರೈಲುಗಳು ಐದು ಮಾರ್ಗಗಳಲ್ಲಿ ಒಂದೇ ದಿನ ಕಾರ್ಯಾಚರಣೆ ಆರಂಭಿಸುತ್ತಿರುವುದು ಇದೇ ಮೊದಲು.