ಬೆಳಗಾವಿ :
ಬೆಳಗಾವಿ ಜಿಲ್ಲೆಯ ಲಕ್ಷಾಂತರ ಜನರ ಕನಸು ಕೊನೆಗೂ ನನಸಾಗಿದೆ.
ಬೆಳಗಾವಿ ಮಹಾನಗರಕ್ಕೆ ವಂದೇ ಭಾರತ್ ಇಂದು ಪ್ರಾಯೋಗಿಕ ಸಂಚಾರ ನಡೆಸಿದೆ. ಈ ತಿಂಗಳ ಕೊನೆಯಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ಸಾಧ್ಯತೆ ಇದೆ. ಇಂದು ರೈಲು ನಿಲ್ದಾಣಕ್ಕೆ ಆಗಮಿಸಿದಾಗ ನೂರಾರು ಜನ ಈ ವಂದೇ ಭಾರತ್ ರೈಲು ನೋಡಿ ಪುಳಕಿತಕೊಂಡರು.
ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಪ್ರಯಾಣಿಕರು ಹಾಗೂ ಜನರು ವಂದೇ ಭಾರತ ರೈಲಿನ ಚಿತ್ರಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದರು.
ಜನಜಾಗೃತಿ ಮೂಡಿಸಿದ್ದ ಪತ್ರಿಕೆ :
ರಾಜ್ಯದ ಎರಡನೇ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿಗೆ ಇಂದಿನಿಂದ ವಂದೇ ಭಾರತ್ ರೈಲು ವಿಸ್ತರಣೆ ಆದಂತಾಗಿದೆ. ಬೆಳಗಾವಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಒದಗಿಸುವಂತೆ ಜನಜೀವಾಳ ಮೇಲಿಂದ ಮೇಲೆ ವರದಿ ಪ್ರಕಟಿಸಿ ಜನಜಾಗೃತಿ ಮೂಡಿಸಿತ್ತು.
ಇದೀಗ ಕೊನೆಗೂ ವಂದೇ ಭಾರತ ರೈಲು ಬೆಳಗಾವಿಗೆ ಬಂದಿರುವುದು ಈ ಭಾಗದ ಜನತೆಯ ಅಪಾರ ಸಂತಸಕ್ಕೆ ಕಾರಣವಾಗಿದೆ. 7.45 ಗಂಟೆಯಲ್ಲಿ ಈ ರೈಲು ಕ್ರಮಿಸುವ ಸಾಧ್ಯತೆ ಇದೆ. ಈ ತಿಂಗಳ ಅಂತ್ಯದಿಂದಲೇ ಸಂಚಾರ ಆರಂಭವಾಗುವುದು ಎಂದು ಹೇಳಲಾಗಿದೆ.
ಮಂಗಳವಾರದಿಂದ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಬೆಳಗಾವಿವರೆಗೆ ವಿಸ್ತರಣೆಯಾಗುತ್ತಿದೆ. ಬೆಂಗಳೂರಿನಿಂದ ಬೆಳಗ್ಗೆ 5:45 ಕ್ಕೆ ಹೊರಡಲಿರುವ ಈ ಎಕ್ಸ್ ಪ್ರೆಸ್ ಬೆಳಗ್ಗೆ 10.55 ಕ್ಕೆ ಹುಬ್ಬಳ್ಳಿ, 11.20 ಕ್ಕೆ ಧಾರವಾಡ, ಮಧ್ಯಾಹ್ನ 1.30 ಕ್ಕೆ ಬೆಳಗಾವಿಗೆ ಬರಲಿದೆ.
ಬೆಳಗಾವಿಯಿಂದ ಮಧ್ಯಾಹ್ನ 2ಕ್ಕೆ ವಾಪಸ್ ಹೊರಡಲಿದೆ. ಸಂಜೆ 4:15ಕ್ಕೆ ಧಾರವಾಡ 4:45 ಕ್ಕೆ ಹುಬ್ಬಳ್ಳಿ, ರಾತ್ರಿ 10.10 ಕ್ಕೆ ಬೆಂಗಳೂರು ತಲುಪುವ ಸಾಧ್ಯತೆ ಇದೆ.