ಸಂಸದೆ ಮಂಗಲಾ ಅಂಗಡಿ ಭಾಗಿ, ಸಂತಸ
ಕುಂದಾ ನೆನೆಸಿ ಭಾವುಕರಾದ ಜ. ವಿ. ಕೆ. ಸಿಂಗ್: ಮಾಜಿ ಕೇಂದ್ರ ಸಚಿವ ದಿ.ಸುರೇಶ ಅಂಗಡಿ ಅವರಿ ದೆಹಲಿಗೆ ಬಂದಾಗೊಮ್ಮೆ ಬೆಳಗಾವಿಯಿಂದ ಕುಂದಾ ಸಹಿ ತಂದು ಕೊಡುತ್ತಿದ್ದ ಬಗ್ಗೆ ನೆನೆಸಿಕೊಂಡು ಸಚಿವ ಸಿಂಗ್ ಭಾವುಕರಾದರು.
ನವದೆಹಲಿ :ಆತ್ಮನಿರ್ಭರ ಭಾರತ ಯೋಜನೆಯಡಿ ಬೆಳಗಾವಿಯಲ್ಲಿ ಇಂದು ಆರಂಭಿಸಲಾದ ಫ್ಲೈಯಿಂಗ್ ಟ್ರೇನಿಂಗ್ ಸಂಘಟನೆಯ ತರಬೇತಿಯನ್ನು ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜನರಲ್ ವಿ. ಕೆ. ಸಿಂಗ್ ವರ್ಚುಲ್ ಮಿಡಿಯಾ ಮೂಲಕ ಇಂದು ಉದ್ಘಾಟಿಸಿದರು. ಕಮರ್ಷಿಯಲ್ ಪೈಲಟ್ ಲೈಸನ್ಸ್(CPL) ಪಡೆಯ ಬಯಸುವ ಯುವ ಪೈಲಟ್ ಆಕಾಂಕ್ಷಿಗಳಿಗೆ ಅನುವಾಗುವ ತರಬೇತಿ ಬೆಳಗಾವಿಯಲ್ಲೇ ಲಭ್ಯವಾಗಲಿದೆ.
ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಈ ಸಂದರ್ಭ ಮಾತನಾಡಿ ಬೆಳಗಾವಿ ಯುವಕರಿಗೆ ಕೇಂದ್ರ ವಿಮಾನಯಾನ ಸಚಿವಾಲಯದಿಂದ ಆತ್ಮ ನಿರ್ಭರ ಭಾರತ ಅಭಿಯಾನದಡಿ ಬೆಳಗಾವಿಯಲ್ಲಿ ತರಬೇತಿ ಕೊಡುವ ಕೆಲಸ ಶ್ಲಾಘನೀಯ ಎಂದು ಸಂಸದೆ ಮಂಗಲ ಸುರೇಶ ಅಂಗಡಿ ನುಡಿದರು. ಮಾಜಿ ರೈಲ್ವೇ ಸಚಿವ ದಿ. ಶ್ರೀ ಸುರೇಶ ಅಂಗಡಿ ಅವರ ಕನಸು ನನಸು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಬೆಳಗಾವಿಯಲ್ಲಿ FTO( Flying Training Organization) ಆರಂಭಿಸಿದ್ದಕ್ಕಾಗಿ ಮಂಗಲಾ ಅಂಗಡಿ ಧನ್ಯವಾದ ಅರ್ಪಿಸಿದರು.
ಕೇಂದ್ರ ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಲ್, ಜಂಟಿ ಕಾರ್ಯದರ್ಶಿ ಛೂಬಾ, ಉಪ ಕಾರ್ಯದರ್ಶಿ ಸೌರಭ ಉಪಸ್ಥಿತರಿದ್ದರು.
*ವಿಮಾನ ಮರು ಆರಂಭಿಸಿ:ಬೆಳಗಾವಿ- ನವದೆಹಲಿ ಮತ್ತು ಇತರ ನಗರಗಳಿಗೆ ರದ್ದಾಗಿರುವ ವಿಮಾನ ಸೇವೆ ಆರಂಭಿಸಲು ಸಂಸದೆ ಮಂಗಲಾ ಅಂಗಡಿ ಕೋರಿದ್ದಾರೆ.
ಲಿಖಿತ ಪತ್ರದ ಮೂಲಕ ಕೇಂದ್ರಕಗಕೆ ಒತ್ತಾಯಿಸಿದ್ದು ಇಂಡಿಗೋ ಸೇವೆ ನೀಡುವಂತೆ ಒತ್ತಾಯಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ರದ್ದಾಗಿರುವ ಇಂಡಿಗೋ ವಿಮಾನ ನರು ಆರಂಭಿಸುವ ಭವಸೆ ಸಚಿವ ಜ. ವಿ. ಕೆ. ಸಿಂಗ್ ನೀಡಿದ್ದಾರೆ.