ನವದೆಹಲಿ:
ಕೇಂದ್ರದ 2023 ಬಜೆಟ್ 7 ಅಂಶಗಳನ್ನು ಬಜೆಟ್ ಒಳಗೊಳ್ಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ ಹಾಗೂ ಆರ್ಥಿಕ ಸುಧಾರಣೆಯ ಏಳು ಅಂಶಗಳನ್ನು ಒಳಗೊಂಡಿರುತ್ತದೆ ಹೇಳಿದ್ದಾರೆ. ಬಜೆಟ್ 2023 ರ 7 ಪ್ರಮುಖಾಂಶಗಳು ಹೀಗಿವೆ.
* ಕರ್ನಾಟಕಕ್ಕೆ ಬಜೆಟ್ನಲ್ಲಿ ಬಂಪರ್ ಕೊಡುಗೆ, ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ
* ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಮುಂದುವರಿಕೆ
* 2023-24ರಲ್ಲಿ ಬಂಡವಾಳ ಹೂಡಿಕೆ ವೆಚ್ಚವನ್ನು 33% ಅಂದರೆ 10 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 3.3 ಪ್ರತಿಶತವಾಗಿದೆ.
* ಕೃಷಿ ಕ್ರೆಡಿಟ್ ಗುರಿ 20 ಲಕ್ಷ ಕೋಟಿ ರೂ.ಗೆ ಹೆಚ್ಚಳ
* ಜನವರಿ 1, 2023 ರಿಂದ ಪಿಎಂ ಗರೀಬ್ ಕಲ್ಯಾಣ ಆನ್ ಯೋಜನೆಯಡಿ ಎಲ್ಲ ಆದ್ಯತೆಯ ಕುಟುಂಬಗಳಿಗೆ
ಒಂದು ವರ್ಷದವರೆಗೆ ಉಚಿತ ಆಹಾರ ಧಾನ್ಯ ಪೂರೈಸುವ ಯೋಜನೆ ಜಾರಿ
* ದೇಶದಲ್ಲಿ ಹೊಸದಾಗಿ 50 ಏರ್ಪೋರ್ಟ್ಗಳ ಅಭಿವೃದ್ಧಿಗೆ ಅನುಮೋದನೆ-ಅನುದಾನ
ಇಂದಿನ ಪ್ರಮುಖ ಸುದ್ದಿ :- ಇಸ್ರೇಲ್ ಹೈಫಾ ಬಂದರು ಅದಾನಿ ಗ್ರೂಪ್ ತೆಕ್ಕೆಗೆ
* ಸರ್ಕಾರಿ ನೌಕರರ ಕೌಶಲಾಭಿವೃದ್ಧಿಗೆ ಕ್ರಮ
* ಪ್ರಧಾನಮಂತ್ರಿ ಆವಾಸ್ ಯೋಜನಾ ವೆಚ್ಚ ಶೇ.66 ರಷ್ಟು ಏರಿಕೆ, ಇದು ₹79,000 ಕೋಟಿಗೆ ಹೆಚ್ಚಳ
*ನಿರ್ದಿಷ್ಟವಾಗಿ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಣೆಗೆ ಮೂಲಭೂತ ಸೌಲಭ್ಯಗಳೊಂದಿಗೆ PBTG ವಾಸಸ್ಥಾನಗಳ ಅಭಿವೃದ್ಧಿಗೆ PMPBTG ಅಭಿವೃದ್ಧಿ ಮಿಷನ್ ಆರಂಭ, ಮುಂದಿನ 3 ವರ್ಷಗಳಲ್ಲಿ 15,000 ಕೋಟಿ ರೂ ಈ ಯೋಜನೆಗಾಗಿ ಬಳಕೆ
* 7 ಸಾವಿರ ಕೋಟಿ ರೂ.ಗಳ ಅನುದಾನದಲ್ಲಿ ಇ-ಕೋರ್ಟ್ಗಳ ಸ್ಥಾಪನೆ ಘೋಷಣೆ
* ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹಿಸಲು ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 6,000 ಕೋಟಿ ರೂಪಾಯಿಗಳ ಉಪಯೋಜನೆ ಆರಂಭ
* ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಅಪ್ಲಿಕೇಶನ್ಗಳಿಗಾಗಿ 100 ಲ್ಯಾಬ್ಗಳ ಸ್ಥಾಪನೆ, ಐಐಟಿಗೆ ಅನುದಾನದ ಮೂಲಕ ಲ್ಯಾಬ್ ವಜ್ರ ಉತ್ಪಾದನೆಗೆ ಉತ್ತೇಜನ
* PAN ಸಂಖ್ಯೆ ಅಗತ್ಯವಿರುವ ವ್ಯಾಪಾರ ಸಂಸ್ಥೆಗಳಿಗೆ, ನಿರ್ದಿಷ್ಟಪಡಿಸಿದ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ಸಿಸ್ಟಮ್ಗಳಿಗೆ
ಪ್ಯಾನ್ ಅನ್ನು ಸಾಮಾನ್ಯ IDಯಾಗಿ ಗುರುತಿಸುವಿಕೆಯಾಗಿ ಬಳಕೆ
ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು ಈ ಬಜೆಟ್ನಲ್ಲಿ1.3 ಲಕ್ಷ ಕೋಟಿಯಷ್ಟು ಏರಿಕೆ, ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಏರಿಕೆ
* 2030ರ ವೇಳೆಗೆ 5 MMT ಹಸಿರು ಹೈಡ್ರೋಜನ್ ಉತ್ಪಾದನೆ ತಲುಪುವ ಗುರಿ, ಈ ಗುರಿ ಸಾಧಿಸಲು 35,000 ಕೋಟಿ ರೂ.ಗಳ ನಿಗದಿ
* ಭಾರತವು 2070ರ ವೇಳೆಗೆ ಕಾರ್ಬನ್ ಫ್ರೀ ಆಗಲಿದೆ. ಮಾಲಿನ್ಯ ಹೆಚ್ಚಿಸುವ ವಾಹನಗಳು ಗುಜರಿಗೆ. ದೇಶದಲ್ಲಿ ಹಸಿರು ಪರಿಸರ ಅಭಿವೃದ್ಧಿಗೆ ಒತ್ತು
* ಆರೋಗ್ಯ, ಕೃಷಿ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳಕ್ಕೆ ಒತ್ತು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೇಂದ್ರಗಳನ್ನು ಸ್ಥಾಪಿಸಿ ವಿವಿಧ ಕ್ಷೇತ್ರಗಳಲ್ಲಿ ಬಳಕೆಗೆ ಉತ್ತೇಜನ
* ರೈಲ್ವೆ ಇಲಾಖೆಯಲ್ಲಿ ₹2.40 ಲಕ್ಷ ಕೋಟಿ ಬಂಡವಾಳ ಹೂಡಿಕೆ, ಮುಂದಿನ ಹಣಕಾಸು ವರ್ಷದಲ್ಲೇ ಈ ಹೂಡಿಕೆ ಅನುಷ್ಠಾನಕ್ಕೆ
* ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಚಾಲೆಂಜ್ ಮೋಡ್ ಮೂಲಕ 50 ಪ್ರವಾಸಿ ತಾಣಗಳನ್ನು ಆಯ್ಕೆ
ಮಧ್ಯಮವರ್ಗಕ್ಕೆ ಕೇಂದ್ರ ಬಜೆಟ್ ಬಂಪರ್ ಕೊಡುಗೆ-ಆದಾಯ ತೆರಿಗೆ ಮಿತಿ 5 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ, ಹಿರಿಯ ನಾಗರಿಕರಿಗೆ ಠೇವಣಿ ಮೊತ್ತ ಮಿತಿ ಏರಿಕೆ :
ಕೇಂದ್ರದ 2023 ಬಜೆಟ್ 7 ಅಂಶಗಳನ್ನು ಬಜೆಟ್ ಒಳಗೊಳ್ಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಬಜೆಟ್ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ ಹಾಗೂ ಆರ್ಥಿಕ ಸುಧಾರಣೆಯ ಏಳು ಅಂಶಗಳನ್ನು ಒಳಗೊಂಡಿರುತ್ತದೆ ಹೇಳಿದ್ದಾರೆ.
* ವಿತ್ತೀಯ ಕೊರತೆ ಪ್ರಮಾಣ ಶೇಕಡಾ 5.9ಕ್ಕೆ ಇಳಿಕೆ
* ಆದಾಯ ತೆರಿಗೆ ಮಿತಿ 5 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ, 7 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ ಇಲ್ಲ, 15 ಲಕ್ಷ ರೂ. ಆದಾಯಕ್ಕಿಂತ ಹೆಚ್ಚಿಗೆ ಇರುವವರು ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದೆ.
* ಪರಿಷ್ಕೃತ ಕ್ರೆಡಿಟ್ ಗ್ಯಾರಂಟಿ ಯೋಜನೆಯು 9,000 ಕೋಟಿ ರೂ.ಗಳ ಒಳಹರಿವಿನ ಮೂಲಕ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿದೆ. ಇದು ಸಣ್ಣ ಹಾಗೂ ಮಧ್ಯಮ ಕೈಗಾರಿಕೆ(MSME)ಗಳಿಗೆ 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲವನ್ನು ನೀಡಲಿದೆ.
* ಸಣ್ಣ ಕೈಗಾರಿಕೆಗಳಿಗೆ ಸಾಲ ಗ್ಯಾರಂಟಿ ಯೋಜನೆ ಜಾರಿ, ಸಣ್ಣ ಕೈಗಾರಿಕೆಗಳಿಗೆ ಸಾಲದ ಮೇಲಿನ ಬಡ್ಡಿದರ ಶೇಕಡಾ 1ರಷ್ಟು ಇಳಿಕೆ
* ಹಿರಿಯ ನಾಗರಿಕರ ಉಳಿತಾಯ ಮಿತಿ ಹೆಚ್ಚಳ, 15 ಲಕ್ಷದಿಂದ 30 ಲಕ್ಷ ರೂ.ಗಳಿಗೆ ಕರ ಉಳಿತಾಯ ಮಿತಿ ಏರಿಕೆ ಪ್ರಸ್ತಾಪ
* ಬಂಗಾರ, ಬೆಳ್ಳಿ, ವಜ್ರದ ದರ ಏರಿಕೆ
* ಮೊಬೈಲ್ ಬಿಡಿಭಾಗಗಳ ಬೆಲೆ ಇಳಿಕೆ
* ಧೂಮಪಾನಿಗಳಿಗೆ ಕಹಿ ಸುದ್ದಿ, ಇನ್ಮೇಲೆ ಸಿಗರೇಟ್ ದರ ಹೆಚ್ಚಳ. ಸಿಗರೇಟ್ ಮೇಲಿನ ತೆರಿಗೆ ಶೇಕಡಾ 16ರಷ್ಟು ಏರಿಕೆ, ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಏರಿಕೆ
* ಬುಡಕಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಏಕಲವ್ಯ ಶಾಲೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧಾರ, ದೇಶದಲ್ಲಿ 157 ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಆದ್ಯತೆ
* ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಮೂಲ ಕಸ್ಟಮ್ ಸುಂಕದ ದರ 21% ರಿಂದ 13%ಕ್ಕೆ ಇಳಿಕೆ. ಆಟಿಕೆಗಳು, ಬೈಸಿಕಲ್ಗಳು, ಆಟೋಮೊಬೈಲ್ಗಳು ಸೇರಿದಂತೆ ಕೆಲವು ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕಗಳು, ಸೆಸ್ಗಳು ಮತ್ತು ಸರ್ಚಾರ್ಜ್ಗಳಲ್ಲಿ ಸಣ್ಣ ಬದಲಾವಣೆ
* ಎನ್ ಪಿಎಸ್ ಮೇಲಿನ ಹೂಡಿಕೆಗೆ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಕಡಿತದ ಮಿತಿ ಶೇ.10ರಿಂದ ಶೇ.14ಕ್ಕೆ ಏರಿಕೆ
* ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಪ್ರೋತ್ಸಾಹ ಪಡೆಯುವ ಅವಧಿ 2023ರ ಮಾರ್ಚ್ ತನಕ ವಿಸ್ತರಣೆ
* ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.30 ತೆರಿಗೆ, ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.1ರಷ್ಟು ಟಿಡಿಎಸ್
ಕರ್ನಾಟಕಕ್ಕೆ ಬಂಪರ್, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ
* ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಜಾರಿ, 2 ವರ್ಷದ ಅವಧಿಯ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಠೇವಣಿ ಇಡುವ ಮಹಿಳೆಯರಿಗೆ ಶೇ.7.5ರಷ್ಟು ಬಡ್ಡಿ ಯೋಜನೆ. 2 ವರ್ಷಗಳ ಅವಧಿಯೊಂದಿಗೆ, 7.5% ಸ್ಥಿರ ಬಡ್ಡಿದರದೊಂದಿದೆ ಮುಂದರಿಸಬಹುದು ಅಥವಾ ಸಾಲ ಹಿಂತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯವನ್ನು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯು ನೀಡಲಿದೆ.
*ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ ಸಣ್ಣ ಕೈಗಾರಿಕೆಗಳಿಗೆ 9 ಸಾವಿರ ಕೋಟಿ ರೂ.ವರೆಗೂ ಸಾಲ ಹಾಗೂ ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ದರ ಶೇ.1ರಷ್ಟು ಇಳಿಕೆ