- ಬೆಳಗಾವಿ:
- ಕೇಂದ್ರದ ನರೇಂದ್ರ ಮೋದಿ ಸರಕಾರ ಹಲವು ವರ್ಷಗಳ ಹಿಂದೆ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು ಹಳೆಯ ಕಥೆ. ಆದರೂ ಆ 2000 ರೂ. ಮುಖಬೆಲೆಯ ನೋಟುಗಳು ಎಲ್ಲಿಗೆ ಹೋಗಿವೆ ಎತ್ತ ಹೋಗಿವೆ ಎಂಬ ಕುತೂಹಲ ಜನರಲ್ಲಿ ಇದೆ.
- ಈ ನಡುವೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಚೋರ್ಲಾಘಾಟ್ ನಲ್ಲಿ ನಡೆದಿರುವ ರೂ.400 ಕೋಟಿ ದರೋಡೆ ಪ್ರಕರಣ ಇದೀಗ ಮುನ್ನಲೆಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಸಹಕಾರ ಕೋರಿ ಮಹಾರಾಷ್ಟ್ರದ ನಾಸಿಕ್ ಪೊಲೀಸರು ಈಗ ಬೆಳಗಾವಿ ಎಸ್ ಪಿ ಕೆ.ರಾಮರಾಜನ್ ಅವರಿಗೆ ಪತ್ರ ಬರೆದಿದ್ದಾರೆ.
- ಈ ಬಗ್ಗೆ ಜನವರಿ ಒಂದರಂದು ನಾಸಿಕ್ ಪೊಲೀಸರಿಗೆ ಸಂದೀಪ ಪಾಟೀಲ ಎಂಬ ವ್ಯಕ್ತಿ ದೂರು ನೀಡಿದ್ದಾರೆ. ಘಟನೆ 2025ರ ಅಕ್ಟೋಬರ್ 22ರಂದು ನಡೆದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ರೂ.2000 ಮುಖಬೆಲೆಯ ಸುಮಾರು 400 ಕೋಟಿ ರೂಪಾಯಿ ಹಣವನ್ನು ಗೋವಾಕ್ಕೆ ಒಯ್ಯಲಾಗುತ್ತಿತ್ತು. ಅದನ್ನು ಚೋರ್ಲಾಘಾಟ್ ಬಳಿ ದರೋಡೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಕೆ. ರಾಮರಾಜನ್ ಚಲಾವಣೆಯಲ್ಲಿಲ್ಲದ ನೋಟುಗಳ ದರೋಡೆ ಆಗಿರುವ ಕುರಿತು ನಾಸಿಕ್ ಪೊಲೀಸರು ಪತ್ರ ಬರೆದಿದ್ದು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
- ಈ ದೆಸೆಯಲ್ಲಿ ಕರ್ನಾಟಕ ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ಸರ್ವ ಸಹಕಾರ ನೀಡಿದ್ದು ದರೋಡೆ ಪ್ರಕರಣ ಇಷ್ಟರಲ್ಲೇ ಬೆಳಕಿಗೆ ಬರುವ ಸಾಧ್ಯತೆ ಇದೆ.
ಚೋರ್ಲಾಘಾಟ್ ನಲ್ಲಿ ಚಲಾವಣೆ ಇಲ್ಲದ ರೂ.400 ಕೋಟಿ ದರೋಡೆ


