ಬೆಳಗಾವಿ:ಪೀರನವಾಡಿ ಆರ್.ಎಸ್. ಸಂಖ್ಯೆ 38, 113 ರಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು.
ಆಯುಕ್ತ ಶಕೀಲ್ ಅಹ್ಮದ್, ಬಿ.ವಿ. ಹಿರೇಮಠ ಟಿ.ಪಿ.ಎಂ, ಎಸ್.ಸಿ. ನಾಯಕ್ ಇ.ಇ, ಹನೀಫ್ ಅಥಣಿ ಎ.ಇ.ಇ, ಶಿವಕುಮಾರ್ ಟಿ.ಪಿ., ಬಾಲಿಗಡ್ಡಿ, ಪೊಲೀಸ್ ಕಾನ್ಸ್ಟೆಬಲ್ ಮತ್ತು ಇತರ ಬಿಡಿಎ ಸಿಬ್ಬಂದಿ ಉಪಸ್ಥಿತರಿದ್ದರು.
ಇಂಥ ಕಾರ್ಯಚರಣೆ ಬೆಳಗಾವಿಯ ಇತರ ಅನಧಿಕೃತ ಬಡಾವಣೆಗಳಿಗೂ ಮುಂದುವರಿಯಬೇಕು ಎನ್ನುವುದು ಬೆಳಗಾವಿ ಜನತೆಯ ಆಗ್ರಹವಾಗಿದೆ. ಇದು ಕೆಲವರ ಒತ್ತಡದಿಂದ ನಾಟಕೀಯವಾಗಿರದೇ, ಕೆಲವೇ ಬಡಾವಣೆಗಳಿಗೆ ಮಾತ್ರ ಸೀಮಿತವಾಗಿರದೆ ಪ್ರಭಾವಿಗಳ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಅನಧಿಕೃತ ಬಡಾವಣೆಗಳಿಗೂ ವಿಸ್ತರಣೆಯಾಗಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.