ಭಟ್ಕಳ- ತಾಲೂಕಿನ ವೆಂಕ್ಟಾಪುರದ ಶ್ರೀ ಮಠದ ಸಿದ್ದಿವಿನಾಯಕ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಅಷ್ಟ ಬಂಧ ಬ್ರಹ್ಮ ಕಲಸ ಸ್ಥಾಪನಾ ಉತ್ಸವದಲ್ಲಿ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ನಿನಾದ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಶನಿವಾರ ನಡೆಯಿತು.
ಉತ್ಸವದ ಮೊದಲ ದಿನದ ವೇದಿಕೆಯಲ್ಲಿ ಮೊದಲ ಕಾರ್ಯಕ್ರಮ ವಾಗಿ ಮುಂಡಳ್ಳಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ಒಂದು ಗಂಟೆ ನಡೆದ ಭಕ್ತಿ ಸಂಗೀತ ಕಾರ್ಯಕ್ರಮ ದಲ್ಲಿ ಉಮೇಶ ಮುಂಡಳ್ಳಿ ಅವರೊಂದಿಗೆ ಸಂಧ್ಯಾ ಭಟ್ ಹಾಗೂ ನಿನಾದ ಉಮೇಶ ಸಹ ಗಾಯನ ದಲ್ಲಿ ಇದ್ದರು. ಕೊಳಲಿನಲ್ಲಿ ವಿನಾಯಕ ದೇವಾಡಿಗ ಇಡಗುಂಜಿ ಕೀಬೋರ್ಡ್ ನಲ್ಲಿ ವಿಘ್ನೇಶ್ ಗೌಡ ಹೊನ್ನಾವರ ಹಾಗೂ ತಬಲದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದರು.
ಕಾರ್ಯಕ್ರಮದ ನಂತರ ದೇವಾಸ್ಥಾನದ ಧರ್ಮದರ್ಶಿ ಮಂಡಳಿಯ ಸರ್ವ ಸದಸ್ಯರಿಂದ ಉಮೇಶ ಮುಂಡಳ್ಳಿ ಅವರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.