ಬೆಳಗಾವಿಯಲ್ಲಿ ಧರ್ಮಸ್ಥಳ ಸಂಘ ಮಿಟಿಂಗ್ ಮುಗಿಸಿ ಗೇಟ್ ಹಾಕುವಾಗ ಇಬ್ಬರ ದಾರುಣ ಸಾವು..!
CM ಬಂದ ದಿನವೇ ಸುಳೇಭಾವಿಯಲ್ಲಿ ವಿದ್ಯುತ್ ತಗುಲಿ ನಡೆದ ಘೋರ ಘಟನೆ ..!
ಬೆಳಗಾವಿ : ತಾಲೂಕಿನ ಸುಳೇಭಾವಿ ಗ್ರಾಮದ ವಾಲ್ಮೀಕಿ ಗುಡಿಯಲ್ಲಿ ಧರ್ಮಸ್ಥಳ ಸಂಘದ ಮಿಟಿಂಗ್ ಮುಗಿಸಿ ಗಡಿ ಸ್ವಚ್ಛಗೊಳಿಸಿ ಗೇಟ್ ಹಾಕುವಾಗ ಗೇಟ್ ಗೆ ಹತ್ತಿಕೊಂಡು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಗೆಟ್ ಗೆ ತಗುಲಿದ ವಿದ್ಯುತ್ ಇಬ್ಬರು ಮಹಿಳೆಯರಿಗೆ ತಗುಲಿ ಸಾವನ್ನಪ್ಪಿರುವ ದಾರುಣ ಇಂದು ಸಾಯಂಕಾಲ ಸಂಭವಿಸಿದೆ.
ಸುಳೇಭಾವಿ ಗ್ರಾಮದ 36 ವರ್ಷದ ಸವಿತಾ ಫಕಿರಪ್ಪಾ ಒಂಟಿ ಹಾಗೂ 37 ವರ್ಷದ ಕಲಾವತಿ ಮಾರುತಿ ಬಿರಾದಾರ ಇಬ್ಬರು ಮೃತ ದುರ್ದೈವಿಗಳು.
ಇವರಲ್ಲಿ ವಿದ್ಯುತ್ ತಗುಲಿ ಒರ್ವರು ಸ್ಥಳದಲ್ಲೇ ಮೃತಪಟ್ಟಿದ್ದರು, ಇನ್ನೋರ್ವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಪಿಎಸ್ಐ ಮಂಜುನಾಥ್ ನಾಯಿಕ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.