ಬೆಳಗಾವಿ : ಚೀನಾ ದೇಶಕ್ಕೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು ಅವರನ್ನು ಬಂಧಿಸಲು ತಂಡ ರಚಿಸಲಾಗಿದೆ. ಖಾನಾಪುರ ತಾಲೂಕು ಲೋಂಡಾ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇವರನ್ನು ವಿಚಾರಣೆಗೊಳಪಡಿಸಿದಾಗ ಚಿಪ್ಪು ಹಂದಿ ಹಿಡಿದು ಸಾಗಿಸುತ್ತಿರುವ ಮಾಹಿತಿ ಲಭಿಸಿದೆ. ತಕ್ಷಣ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೈಲಿಗೆ ರವಾನಿಸಲಾಗಿದೆ. ಉಳಿದಿಬ್ಬರನ್ನು ಪತ್ತೆಹಚ್ಚಲು ತಂಡ ರಚನೆ ಮಾಡಲಾಗಿದೆ. ಎಸಿಎಫ್ ಸುನಿತಾ ನಿಂಬರಗಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.ಚೀನಾದಲ್ಲಿ ಔಷಧಿ ಉತ್ಪಾದನೆಗೆಗೆ ಅತಿಹೆಚ್ಚು ಚಿಪ್ಪು ಹಂದಿ ಬಳಕೆ ಮಾಡಲಾಗುತ್ತದೆ. ಹೀಗಾಗಿ ಈ ಖದೀಮರ ಗ್ಯಾಂಗ್ ಚೀನಾಗೆ ಚಿಪ್ಪು ಹಂದಿ ಕಳ್ಳ ಸಾಗಣೆ ಮೂಲಕ ರಫ್ತು ಮಾಡುತ್ತಿದ್ದರು.
ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಬಂಧನ ; ಇನ್ನಿಬ್ಬರು ಪರಾರಿ
