ಬೆಳಗಾವಿ :
2-11-2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಮಚ್ಚೆ ಗ್ರಾಮದ ಲಕ್ಷ್ಮೀನಗರದಲ್ಲಿ ಮನೆ ಮತ್ತು ಕಾರು ಕಳ್ಳತನವಾದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿದ್ದರು.
ಹಿರಿಯ ಪೊಲೀಸ್ ಅಧಿಕಾರಗಳ ಆದೇಶದಂತೆ ಎಸ್.ವಿ.ಗಿರೀಶ , ಎಸಿಪಿ , ಬೆಳಗಾವಿ ಗ್ರಾಮೀಣ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ ಮತ್ತು ಶ್ರೀನಿವಾಸ ಹಾಂಡ , ಪೊಲೀಸ್ ನಿರೀಕ್ಷಕರು , ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಅವರ ತಂಡ ಈ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿತರಾದ 1 ) ಕೃಷ್ಣಾ , ರಾಜು ತಂದೆ ಆಶೋಕ ರಾಮನ್ನವರ , 2 ) ನಾಗರಾಜ@ ಅಪ್ಪು ತಂದೆ ಸಂಗಪ್ಪ ಬುದ್ಲಿ ಇವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜಪಡಿಸಲಾಗಿತ್ತು . ಅವರ ಹೇಳಿಕೆಯನ್ನಾಧರಿಸಿ ಈ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿತರಾದ 1 ) ಶಿವನಾಗಯ್ಯಾ ಮುತ್ತಯ್ಯಾ ಉಮಚಗಿಮಠ ‘( 26 ) ಸಾ || ಇಂಡಸ್ಟ್ರಿಯಲ್ ಎರಿಯಾ, ಮಚ್ಛೆ, 2 ) ಆಕಾಶ ಮಧು @ಮಧುಕರ ಗಾಂವಕರ ( 22 ) ಸಾ || ಕುರುಬರಗಲ್ಲಿ , ಮಚ್ಛೆ ತಾ.ಬೆಳಗಾವಿ , ಇವರನ್ನು ದಿನಾಂಕ : 29/01/2023 ರಂದು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಇವರು ಬೆಳಗಾವಿ ಗ್ರಾಮೀಣ ಠಾಣೆಯ ಮೂರು ಮನೆಗಳ್ಳತನ ಮತ್ತು ಒಂದು ಸುಲಿಗೆ ಪ್ರಕರಣ ಹಾಗೂ ಎಪಿಎಂಸಿ ಮತ್ತು ಉದ್ಯಮಬಾಗದಲ್ಲಿ ತಲಾ ಒಂದು ಸುಲಿಗೆ ಪ್ರಕರಣಗಳು ಹೀಗೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿವುದಾಗಿ ಒಪ್ಪಿಕೊಂಡಿರುತ್ತಾರೆ . ಆರೋಪಿತರು ಸುಲಿಗೆ ಮತ್ತು ಕಳ್ಳತನ ಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದು , ಒಟ್ಟು 3,00,000 / – ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು , ಎಲ್ . ಜಿ . ಕಂಪನಿಯ ಮೊನಿಟರ್ ಹಾಗೂ ಟಿವಿ ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ
ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.