ಬೆಳಗಾವಿ : ಮಹತ್ವದ ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.
ಯಡಾ ಮಾರ್ಟಿನ ಮಾರ್ಬನ್ಯಾಂಗ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ರೋಹನ ಜಗದೀಶ ಉಪ-ಪೊಲೀಸ್ ಆಯುಕ್ತರು (ಕಾ&ಸು), ನಿರಂಜನ ಅರಸ ಉಪ-ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ಸಂತೋಷ ಸತ್ಯನಾಯ್ಕ ಎ.ಸಿ.ಪಿ.ಸಾಹೇಬರು ಮಾರ್ಕೇಟ್ ಉಪ-ವಿಭಾಗ ಬೆಳಗಾವಿ ಇವರ ಮಾರ್ಗದರ್ಶನದಲ್ಲಿ ಜೆ.ಎಮ್.ಕಾಲಿಮಿರ್ಚಿ ಪೊಲೀಸ್ ಇನ್ಸ್ ಪೆಕ್ಟರ್ ಮಾಳಮಾರುತಿ ಪೊಲೀಸ್ ಠಾಣೆ ಬೆಳಗಾವಿ ಇವರ ನೇತೃತ್ವದಲ್ಲಿ ಬೆಳಗಾವಿ ಶಹರದ ಅಮನ ನಗರದಲ್ಲಿ ದಿನಾಂಕ: ೧೯-೦೧-೨೦೨೫ ರಂದು ರಾತ್ರಿ ವೇಳೆಯಲ್ಲಿ ಮನೆಯನ್ನು ಕಳ್ಳತನ ಮಾಡಿದ ಆರೋಪಿತನಾದ ೧) ಫರ್ಹಾನ ರಿಯಾಜಅಹ್ಮದ ದಾಲಾಯತ ವಯಸ್ಸು: ೨೨ ವರ್ಷ ಸಾ: ಗುಲಾಬ ಶಾ ಗಲ್ಲಿ ನ್ಯೂ ಗಾಂಧಿ ನಗರ ಬೆಳಗಾವಿ ಈತನಿಗೆ ಮತ್ತು ಸದರಿ ಕಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಇಟ್ಟುಕೊಂಡಿದ್ದ ಆರೋಪಿತನಾದ ೨) ಜುಬೇರಅಹ್ಮದ ಅಬ್ದುಲರಸೀದ ದಾಲಾಯತ ವಯಸ್ಸು: ೨೫ ವರ್ಷ ಸಾ: ನೂರಾನಿ ಮಸೀದಿ ಹತ್ತಿರ ಉಜ್ವಲ ನಗರ ೮ ನೇ ಕ್ರಾಸ್ ಬೆಳಗಾವಿ ಇವರಿಗೆ ದಸ್ತಗೀರ ಮಾಡಿ ಸದರಿಯವರ ತಾಬಾದಲ್ಲಿಂದ ಸುಮಾರು ೭,೫೦,೦೦೦/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಸದರಿಯವರು ಮಾನ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಅಲ್ಲದೇ ಸದರಿ ಆರೋಪಿತನಾದ ೧) ಫರ್ಹಾನ ರಿಯಾಜಅಹ್ಮದ ದಾಲಾಯತ ವಯಸ್ಸು: ೨೨ ವರ್ಷ ಸಾ: ಗುಲಾಬ ಶಾ ಗಲ್ಲಿ ನ್ಯೂ ಗಾಂಧಿ ನಗರ ಬೆಳಗಾವಿ ಈ ಹಿಂದೆ ೨೦೨೪ ನೇ ಸಾಲಿನಲ್ಲಿ ರಾಬರಿ ಕಳ್ಳತನ ಮತ್ತು ಮನೆಗಳ್ಳತನ ಪ್ರಕರಣದಲ್ಲಿ ಹಾಗೂ ಗಾಂಜಾ ಸೇವನೆ ಪ್ರಕರಣದಲ್ಲಿ ಬಾಗಿಯಾಗಿದ್ದಲ್ಲದೇ ದಿನಾಂಕ: ೦೨-೦೧-೨೦೨೫ ರಂದು ಉಜ್ವಲ ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಸದರಿಯವನ ಮೇಲೆ ಮುಂಜಾಗೃತಾ ಕ್ರಮವಾಗಿ ಪ್ರಕರಣದ ದಾಖಲಿಸಿದ್ದು ಇರುತ್ತದೆ. ಆರೋಪಿ ೨) ಜುಬೇರಅಹ್ಮದ ಅಬ್ದುಲರಸೀದ ದಾಲಾಯತ ವಯಸ್ಸು: ೨೫ ವರ್ಷ ಸಾ: ನೂರಾನಿ ಮಸೀದಿ ಹತ್ತಿರ ಉಜ್ವಲ ನಗರ ೮ ನೇ ಕ್ರಾಸ್ ಬೆಳಗಾವಿ ಈತನು ಸನ್-೨೦೨೧ ನೇ ಸಾಲಿನಲ್ಲಿ ರಾಬರಿ ಕಳ್ಳತನ ಪ ್ರಕರಣದಲ್ಲಿ ಬಾಗಿಯಾಗಿದ್ದು ಇರುತ್ತದೆ. ಸದರಿ ಪ ಪ್ರಕರಣದ ಕಾರ್ಯಾಚರಣೆಯಲ್ಲಿ ಹೊನ್ನಪ್ಪ ತಳವಾರ ಪಿ.ಎಸ್.ಐ, ಶ್ರೀಶೈಲ್ ಹುಳಗೇರಿ ಪಿ.ಎಸ್.ಐ, ಉದಯ ಪಾಟೀಲ ಪಿ.ಎಸ್.ಐ, ಮತ್ತು ಸಿಬ್ಬಂದಿ ಎಮ್.ಜಿ.ಕುರೇರ, ಸಿ.ಜೆ.ಚಿನ್ನಪ್ಪಗೋಳ, ಬಿ.ಎಫ್.ಬಸ್ತವಾಡ, ಜಗನ್ನಾಥ ಭೋಸಲೆ, ಬಸವರಾಜ ಕಲ್ಲಪ್ಪನವರ, ಸಿ.ಐ.ಚಿಗರಿ, ಕೆ.ಬಿ.ಗೌರಾಣಿ, ಮಲಿ ಮಲ್ಲಿಕಾರ್ಜುನ ಗಾಡವಿ, ಮಹೇಶ ಒಡೆಯರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ ಅಕ್ಕಿ, ಮಹಾದೇವ ಕಾಸೀದ ಮತ್ತು ಬೆರಳು ಮುದ್ರೆ ತಜ್ಞರಾದ ವಿಶ್ವನಾಥ ಮಠಪತಿ, ಬಾಹುಬಲಿ ಅಲಗಾಲೆ, ಸಂತೋಷ ಮನಕಾಪೂರೆ, ರುದ್ರಯ್ಯಾ ಹಿರೇಮಠ ಮತ್ತು ಸೋಕೋ ಅಧಿಕಾರಿಗಳಾದ ಹರೀಶ ಯಡ್ರಾವಿ ಇವರು ಪ್ರಶಂಸನಿಯ ಕೆಲಸ ಮಾಡಿದ್ದು ಅವರಿಗೆ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.