ಬೆಳಗಾವಿ :
ಯರಗಟ್ಟಿ ಸಮೀಪದ ಮಾಡಮಗೇರಿ ಗ್ರಾಮದಲ್ಲಿ ಶನಿವಾರ ಮಳೆಯಿಂದಾಗಿ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.
ಯಲ್ಲವ್ವ ಮಹಾದೇವ ಬಾಗಿಲದ (40 ವರ್ಷ)ಮತ್ತು ಅವರ ಪುತ್ರ ಪ್ರಜ್ವಲ್ (5 ವರ್ಷ ) ಮೃತಪಟ್ಟವರು. ಉದ್ದವ್ವ ಬಾಗಿಲದ ಮತ್ತು ರೂಪಾ ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಇಂದು ಸಂಜೆ 5.30 ಗಂಟೆ ಸುಮಾರಿಗೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.