ಬೆಳಗಾವಿ :
ಹುಕ್ಕೇರಿ ತಾಲೂಕಿನ ಬೆನಕನಹೊಳಿ ಬಳಿ ಬಸ್ಸಿಗೆ ಕಲ್ಲು ಎಸೆದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪರಶುರಾಮ ನಾಯಿಕ ಹಾಗೂ ಬಸವರಾಜ ಶಿಂದೆ ಬಂಧಿತರು. ಗುರುವಾರ ಹುಕ್ಕೇರಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್ಸಿಗೆ ಇವರಿಬ್ಬರು ಕಲ್ಲು ತೂರಿದ್ದರಿಂದ ವ್ಯಕ್ತಿಯೊಬ್ಬರಿಗೆ ಕಲ್ಲಿನೇಟು ತಗುಲಿತ್ತು.
ಯಮಕನಮರಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ.