ಲಕ್ನೋ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದ ಬಗ್ಗೆ ಈ ಹಿಂದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಟೀಕೆ ಮಾಡಿದ್ದರು. ಇದೀಗ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಈ ನೀರಿನಲ್ಲಿ ಪ್ರಾಣಿಗಳ ಮಲದಲ್ಲಿರುವ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಹೇಳಿದ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಕ್ರಿಯೆ ನೀಡಿದ್ದು ”ತ್ರಿವೇಣಿ ಸಂಗಮದ ನೀರು ಸ್ನಾನಕ್ಕೆ ಮಾತ್ರವಲ್ಲ ಆಚಮನಕ್ಕೂ ಯೋಗ್ಯ” ಎಂದಿದ್ದಾರೆ.
ಬುಧವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಮಹಾಕುಂಭದ ಸಮಯದಲ್ಲಿ ಈಗಾಗಲೇ 56.25 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಮತ್ತು ಸ್ನಾನ ಮಾಡಿದ ಹಲವಾರು ಸೆಲೆಬ್ರಿಟಿಗಳು ವ್ಯವಸ್ಥೆಗಳನ್ನು ಶ್ಲಾಘಿಸಿದ್ದಾರೆ” ಎಂದರು.
ಸನಾತನ ಧರ್ಮ, ಗಂಗಾ ಮಾತೆ, ಭಾರತ ದೇಶ ಅಥವಾ ಮಹಾಕುಂಭದ ವಿರುದ್ಧ ನಾವು ಯಾವುದೇ ಆಧಾರರಹಿತ ಆರೋಪಗಳನ್ನು ಮಾಡಿದರೆ ಅಥವಾ ನಕಲಿ ವೀಡಿಯೊಗಳನ್ನು ತೋರಿಸಿದರೆ ಅದು ಈ 56 ಕೋಟಿ ಜನರ ನಂಬಿಕೆಯೊಂದಿಗೆ ಆಟವಾಡಿದಂತೆ, ”ಎಂದು ಮುಖ್ಯಮಂತ್ರಿ ಕಿಡಿ ಕಾರಿದರು.
ಬುಧವಾರದ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ (UPCB) ವರದಿಯನ್ನು ಉಲ್ಲೇಖಿಸಿದ ಆದಿತ್ಯನಾಥ್, ಜೈವಿಕ ಆಮ್ಲಜನಕದ ಬೇಡಿಕೆ (BOD) ಮಟ್ಟವು 3 mg/ಲೀಟರ್ಗಿಂತ ಕಡಿಮೆಯಾಗಿದೆ ಮತ್ತು ಗಂಗಾ ನದಿಯಲ್ಲಿ ಕರಗಿದ ಆಮ್ಲಜನಕ (DO) ಮಟ್ಟವು 5 mg/ಲೀಟರ್ನಿಂದ ಸುಮಾರು 9 mg/ಲೀಟರ್ಗೆ ಸುಧಾರಿಸಿದೆ ಎಂದು ಹೇಳಿದರು.
ಸನಾತನ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರಾಧವಾದರೆ, ನಮ್ಮ ಸರಕಾರ ಆ ಅಪರಾಧವನ್ನು ಮಾಡುತ್ತಲೇ ಇರುತ್ತದೆ,’’ ಎಂದು ಸಮಾಜವಾದಿ ಪಕ್ಷ, ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಕಿಡಿ ಕಾರಿದರು.
ಒಟ್ಟಾರೆ 56 ಕೋಟಿ ಭಕ್ತರು ಈಗಾಗಲೇ ಪ್ರಯಾಗರಾಜ್ ನಲ್ಲಿ ಪವಿತ್ರ ಸ್ಥಾನ ಮಾಡಿ ಪುಣ್ಯ ಅನುಭವಿಸಿದ್ದಾರೆ. ಆದರೆ ಎಂದಿನಂತೆ ಈಗಲೂ ಟೀಕಾಕಾರರು ಮಾತ್ರ ಸುಮ್ಮನಾಗಿಲ್ಲ. ಅವರು ಎಂದಿನಂತೆಯೇ ವಿರೋಧವಾಗಿಯೇ ಮಾತನಾಡುತ್ತಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬೇಸರಗೊಂಡಿದ್ದು ಭಕ್ತರ ಹಾಗೂ ಭಾರತೀಯರ ಹಾಳು ಮಾಡಲು ಹೋಗಬೇಡಿ ಎಂದು ವಿರೋಧಿಗಳ ವಿರುದ್ಧ ಸಮರ ಸಾರಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ
ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಅದು ‘ಮೃತ್ಯು ಕುಂಭ’ವಾಗಿ ಪರಿವರ್ತನೆ ಆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.
ಜನವರಿ 29ರಂದು ಮೌನಿ ಅಮಾವಾಸ್ಯೆಯಂದು ಸಂಗಮದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಕಾಲ್ತುಳಿತ, ರಸ್ತೆ ಅಪಘಾತ ಸೇರಿದಂತೆ ಕುಂಭಮೇಳಕ್ಕೆ ಸಂಬಂಧಿಸಿದ ಅವಘಡಗಳಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಅವರು, ‘ಸರ್ಕಾರವು ಸಂತ್ರಸ್ತರೊಂದಿಗೆ ಇದ್ದು, ಅವರಿಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.
‘ಮೊದಲ ದಿನದಿಂದಲೂ ವಿರೋಧ ಪಕ್ಷಗಳು ಕುಂಭಮೇಳದ ವಿರುದ್ಧ ನಿಂತಿವೆ. ಕುಂಭಮೇಳದ ಸಿದ್ಧತೆಯ ಕುರಿತಾಗಿನ ಚರ್ಚೆಯಲ್ಲೂ ನೀವು ಭಾಗವಹಿಸಿಲ್ಲ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ಜೆಡಿ ಮತ್ತು ಟಿಎಂಸಿ ನಾಯಕರು ಕುಂಭಮೇಳದ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. ಸನಾತನ ಧರ್ಮದ ಕಾರ್ಯಕ್ರಮವನ್ನು ಆಯೋಜಿಸುವುದು ಅಪರಾಧವಾದರೆ, ಸರ್ಕಾರವು ಆ ಅಪರಾಧವನ್ನು ಮಾಡುತ್ತಲೇ ಇರುತ್ತದೆ’ ಎಂದು ಹೇಳಿದ್ದಾರೆ.
‘ಸಂಗಮದ ನೀರಿನ ನೈರ್ಮಲ್ಯದ ಕುರಿತು ಪ್ರಶ್ನೆಗಳನ್ನು ಎತ್ತಲಾಗಿದೆ. ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿಪಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಸದನದ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ‘ನಾವು ಇಲ್ಲಿ ಕುಂಭಮೇಳದ ಕುರಿತು ಚರ್ಚಿಸುತ್ತಿರುವಾಗಲೇ 56 ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಹಾಗಿರುವಾಗ ಆಧಾರರಹಿತ ಆರೋಪಗಳನ್ನು ಮಾಡುವುದು 56 ಕೋಟಿ ಭಕ್ತರ ನಂಬಿಕೆಯೊಂದಿಗೆ ಆಟವಾಡಿದಂತೆ’ ಎಂದು ಹೇಳಿದ್ದಾರೆ.
‘ಕುಂಭಮೇಳವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಆಯೋಜಿಸುತ್ತಿಲ್ಲ. ಇಡೀ ಸಮಾಜವೇ ನಡೆಸಿಕೊಡುತ್ತಿದೆ. ಸರ್ಕಾರ ಅವರ ಸೇವೆಯನ್ನು ಮಾಡುತ್ತಿದೆ. ಈ ಶತಮಾನದ ವಿಶಿಷ್ಟ ಕುಂಭಮೇಳವನ್ನು ನಡೆಸಿಕೊಡುವ ಅವಕಾಶ ನಮ್ಮ ಸರ್ಕಾರಕ್ಕೆ ದೊರಕಿರುವುದು ನಮ್ಮ ಅದೃಷ್ಟ’ ಎಂದು ಹೇಳಿದ್ದಾರೆ.