ಬೆಳಗಾವಿಯಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ
ಬೆಳಗಾವಿ :
ಸೋಮವಾರ ಇಹಲೋಕ ಯಾತ್ರೆ ಅಂತ್ಯಗೊಳಿಸಿದ ವಿಶ್ವ ಸಂತ, ನಡೆದಾಡುವ
ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಮುಂಜಾನೆ ನಡೆದ
ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾಹಿತಿಗಳು, ಚಿಂತಕರು, ಕನ್ನಡ
ಹೋರಾಟಗಾರರು ಭಾಗವಹಿಸಿದ್ದ
ಸಭೆಯ ಅಧ್ಯಕ್ಷತೆಯನ್ನು ಎಂ.ಎಸ್.ಇಂಚಲ ವಹಿಸಿದ್ದರು.
ಬಸವರಾಜ ಜಗಜಂಪಿ,
ಬಿ.ಎಸ್.ಗವಿಮಠ, ಸರಜೂ ಕಾಟ್ಕರ್, ಯ.ರು.ಪಾಟೀಲ, ಅಶೋಕ ಚಂದರಗಿ,
ಕೆಂಪನ್ನವರ, ಬಸವರಾಜ ಗಾರ್ಗಿ, ಡಾ.ರಾಜಶೇಖರ , ಶಿರೀಶ ಜೋಶಿ,
ಮುಂತಾದವರು ನುಡಿನಮನ
ಸಲ್ಲಿಸಿ ಅಗಲಿದ ಸಂತರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.