ಬೆಳಗಾವಿ :
ಮರಾಠಾ ಸಮಾಜಕ್ಕೆ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿಗೆ ಆಗಮಿಸಿದ್ದ ಶ್ರೀ ಮಂಜುನಾಥ ಸ್ವಾಮೀಜಿ ಅವರನ್ನು ಇಲ್ಲಿಯ ಮರಾಠಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿದ ಶ್ರೀ ಮಂಜುನಾಥ ಸ್ವಾಮೀಜಿಯವರು, ಮರಾಠಾ ಸಮಾಜದ ಅಭಿವೃದ್ಧಿಗೆ ಪೂರಕವಾದ ಮೀಸಲಾತಿ ನೀಡಲು ಸರಕಾರ ಮುಂದಾಗಬೇಕು. ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಯನ್ನು ಆದಷ್ಟು ಬೇಗನೇ ಈಡೇಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಶ್ರೀ ಶ್ರೀ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿಯವರು ಸಭೆ ನಡೆಸಿದರು.
ಸಮಾಜದ ಎಲ್ಲಾ ಜನರು ಒಗ್ಗೂಡಬೇಕು. ಒಟ್ಟಾರೆ, ಸಮಾಜ ಅಭಿವೃದ್ಧಿ ಹೊಂದಬೇಕು, ಮೊದಲು ನಾವು ಮನುಷ್ಯರು, ಸಮಾಜದ ಸರಿಯಾದ ಕಾರ್ಯನಿರ್ವಹಣೆಗಾಗಿ ಜಾತಿ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಎಲ್ಲ ಅಂಶಗಳು ಒಗ್ಗೂಡಿ ಅಭಿವೃದ್ಧಿ ಹೊಂದಬೇಕು ಎಂದು ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಹಾಗೂ ಸಕಲ ಮರಾಠಾ ಸಮಾಜದ ಸಂಘಟಕ ಕಿರಣ ಜಾಧವ್ ಉಪಸ್ಥಿತರಿದ್ದರು. ಸಮಾಜದ ಪರವಾಗಿ ಸ್ವಾಮೀಜಿಯವರಿಗೆ ಪುಷ್ಪ ಮಾಲೆ, ಶ್ರೀಫಲ, ಶಾಲು ಹೊದಿಸಿ ಸತ್ಕರಿಸಲಾಯಿತು. ವಿಶ್ವಕರ್ಮ ಮನು-ಮಾಯಾ ಸಂಸ್ಥಾನದ ಮುಖ್ಯ ಕಾರ್ಯಕಾರಿ ಸಮಿತಿಯು ಉಪಸ್ಥಿತರಿದ್ದರು. ಭರತ ಶಿರೋಳ್ಕರ್, ಪ್ರಭಾಕರ ಸುತಾರ್, ಕಿಶೋರ್ ಕಂಬರ್ಕರ್, ಸೋಹನ್ ಸುತಾರ್, ಕಿಶನ್ ತೋಕನೇಕರ್, ವಿಜಯ್ ಸುತಾರ್, ಪ್ರದೀಪ್, ದೈವಜ್ಞ ಬ್ರಾಹ್ಮಣ ಸಮಾಜದ ಪರವಾಗಿ ಪ್ರದೀಪ್ ಅರ್ಕಸಾಲಿ, ಅಮಿತ್ ಹೆರೇಕರ್, ಸಾಗರ್ ಹಳದಂಕರ್, ಪ್ರಕಾಶ್ ಕಲಘಟಕರ್, ಸಚಿನ್ ಕಾರೇಕರ್, ಕಿರಣ್ ಕಾರೇಕರ್, ಗುರುನಾಥ ಶಿರೋಡ್ಕರ್, ಸುರೇಶ್ ಚಿಂಚೇನೇಕರ್, ವಿಜಯ್ ಸಾಂಬ್ರೇಕರ್, ವಿಠ್ಠಲ ಪಾಲೇಕರ್, ಮಯೂರ್ ಚವ್ಹಾಣ, ವಿಷ್ಣು ಸರೋಲ್ಕರ್, ವಿನಾಯಕ್ ಸಂತ ಗಡಗೆ ಮಹಾರಾಜ ಸಮಾಜದ ಪರವಾಗಿ ಪವಾರ್, ವಿಕ್ರಮ್, ಜ್ಯೋತಿಬಾ ಉಪಾರ್ಡೇಕರ್, ಸತೀಶ ಲಕ್ಲೆ, ಮಂಗನ ಪಾಳೇಕರ್, ಪರಶರಾಮ ಅಷ್ಟೇಕರ, ಲಖನ್ ಪರೀತ್, ರಾಜು ಯಾದವ ಉಪಸ್ಥಿತರಿದ್ದರು. ಸಮಾಜ ಬಾಂಧವರು ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.