ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ, ಖ್ಯಾತ ಕನ್ನಡ ಕಾದಂಬರಿಕಾರ, ಈಚೆಗೆ ಅಗಲಿದ ಎಸ್. ಎಲ್. ಭೈರಪ್ಪ ಅವರಿಗೆ ನಮನ ಸಲ್ಲಿಸಲು “ನುಡಿ ನಮನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಾಹಿತಿ ಡಾ. ರಾಮಕೃಷ್ಣ ಮರಾಠೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಎಸ್. ಎಲ್. ಭೈರಪ್ಪ ಅವರು ಕೇವಲ ಕರ್ನಾಟಕದ ಕಾದಂಬರಿಕಾರರಾಗಿರಲಿಲ್ಲ, ದೇಶದ ಮಹೋನ್ನತ ಕಾದಂಬರಿಕಾರರಾಗಿದ್ದರು ಎಂದು ಹೇಳಿದರು.
ಭೈರಪ್ಪ ಅವರ ಜೀವನಯಾತ್ರೆಯಲ್ಲಿ ಮಾರ್ಗದರ್ಶಕರಾದ ಹಾಗೂ ಅವರ ವ್ಯಕ್ತಿತ್ವವನ್ನು ರೂಪಿಸಲು ಪ್ರೇರಣೆಯಾದವರ ಪಾತ್ರವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಬಡತನವು ಕೆಲವೊಮ್ಮೆ ಜೀವನದಲ್ಲಿ ಶಕ್ತಿ ಮತ್ತು ಸ್ವಭಾವವನ್ನು ರೂಪಿಸುವಂತಾಗಬಹುದು ಎಂಬುದನ್ನು ವಿವರಿಸಿದರು.
ಪ್ರಾಂಶುಪಾಲ ಡಾ. ಎಚ್. ಎ. ಹವಾಲ್ದಾರ ಅಧ್ಯಕ್ಷತೆ ವಹಿಸಿ, ಭೈರಪ್ಪ ಅವರ ಕಾದಂಬರಿಯನ್ನೂ ಓದಲು, ಅದರ ಮಹತ್ವವನ್ನು ಅರಿತುಕೊಳ್ಳಲು ಪ್ರೇರೇಪಿಸಿದರು. ವಿದ್ಯಾರ್ಥಿಗಳಾದ ಫಣಿ ರಾಘವೇಂದ್ರ ಮತ್ತು ಸಹನಾ ವಾಲಿ ಅವರು ಎಸ್. ಎಲ್. ಭೈರಪ್ಪ ಅವರ ಜೀವನ ಮತ್ತು ಸಾಧನೆಗಳ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಭೈರಪ್ಪ ಅವರ ಕೃತಿಗಳು ಮತ್ತು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳನ್ನು ಪ್ರತಿಬಿಂಬಿಸುವ ವಿಶಿಷ್ಟ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರೊ. ಎಂ. ಎಸ್. ಕುಲಕರ್ಣಿ ಹಾಗೂ ಕನ್ನಡ ಬಳಗದ ಅಧ್ಯಕ್ಷೆ ಪ್ರೊ. ಮೋನಿಶಾ ಸ್ವಾಮಿ ಅವರು ಆಯೋಜಿಸಿದ್ದರು. ಸಾಹಿತ್ಯ ಕ್ಲಬ್ನ ಕಾರ್ಯದರ್ಶಿ ಓಂಕಾರ ಪಾಟೀಲ ವಂದಿಸಿದರು. ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದ ಸಂದರ್ಭದಲ್ಲಿ ಉಪಸ್ಥಿತರಿದ್ದರು.


