ಬೆಳಗಾವಿ :
ಶ್ರೀ ಯಲ್ಲಮ್ಮಾದೇವಿ ದಸರಾ ಜಾತ್ರೆಯು ಅ.14 ರಿಂದ ಅ.24 ರ ವರೆಗೆ ವಿಜೃಂಭನೆಯಿಂದ ಜರುಗಲಿದ್ದು, ಜಾತ್ರೆಯ ಮುಖ್ಯ ದಿನಗಳು ಅ.15,17,20,22 ರಂದು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಸದರಿ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ ಕೇಂದ್ರ ನಗರ ಬಸ್ ನಿಲ್ದಾಣದಿಂದ ಯಲ್ಲಮ್ಮಾಗುಡ್ಡದ ವರೆಗೆ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ವಾಕರಸಾಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.