ಬೆಂಗಳೂರು :ರಾಜ್ಯ ಸರಕಾರ ಶುಕ್ರವಾರ 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಸಿಇಒ, ಎಂಡಿಯಾಗಿದ್ದ ಮುಲ್ಲೈ ಮುಹಿಲನ್, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಜಿ.ಪ್ರಭು ಅವರಿಗೆ ಬಡ್ತಿ ಸಿಕ್ಕಿದೆ. ಜೊತೆಗೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ರಸ್ತೆ ಅಗಲೀಕರಣಗೊಳಿಸಿ ಜನಮನ ಗೆದ್ದಿದ್ದ ರವಿಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಳಿಸಿದ್ದು ಹೊಸ ಹುದ್ದೆ ತೋರಿಸಿಲ್ಲ.
ವರ್ಗಾವಣೆಯಾದ 10 ಐಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ.
ಡಾ.ಕುಮಾರ- ಜಿಲ್ಲಾಧಿಕಾರಿ, ಮಂಡ್ಯ
ಪಲ್ಲವಿ ಆಕುರಾತಿ-ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
ಡಾ. ವೆಂಕಟೇಶ ಎಂ.ವಿ.- ಆಯುಕ್ತರು, ಪಶುಸಂಗೋಪನಾ ಇಲಾಖೆ
ರವೀಂದ್ರ ಪಿ.ಎನ್.- ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ
ಶ್ರೀನಿವಾಸ ಕೆ.- ಜಿಲ್ಲಾಧಿಕಾರಿ, ತುಮಕೂರು
ಜಾನಕಿ ಕೆ.ಎಂ.-ಜಿಲ್ಲಾಧಿಕಾರಿ, ಬಾಗಲಕೋಟೆ
ಮುಲ್ಲೈ ಮುಹಿಲನ್ – ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
ಯೋಗೇಶ ಎ.ಎಂ.- ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ
ಪ್ರಭು ಜಿ.-ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ನವೀನಕುಮಾರ ರಾಜು- ಕಾರ್ಯನಿರ್ವಾಹಕರ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸೊಸೈಟಿ.