211 ಇನ್ಸ್ಪೆಕ್ಟರ್ ಗಳ ವರ್ಗಾವಣೆ; ಎರಡನೇ ಪಟ್ಟಿ ಶೀಘ್ರದಲ್ಲೇ ..!
ಮಾರ್ಕೆಟ್, APMC, ಕ್ಯಾಂಪ್, ಮಾಳಮಾರುತಿ, ಮಹಿಳಾ ಠಾಣೆಗೆ ಹೊಸ ಪಿಐಗಳು..!
ಬೆಳಗಾವಿ : ಕಾಂಗ್ರೇಸ್ ಸರ್ಕಾರ ಪೊಲೀಸ್ ಇಲಾಖೆಯ ನೂರಾರು ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡುವ ಮೂಲಕ ಮೇಜರ್ ಸರ್ಜರಿ ಮಾಡಿದೆ. ಒಟ್ಟು 211 ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಇದರಲ್ಲಿ ಬೆಳಗಾವಿ ಮಹಾನಗರದ ಹಲವಾರು ಠಾಣೆಗಳಿಂದ ವರ್ಗಾವಣೆ ಆಗಿರುವ ಪಿಐಗಳ ಸ್ಥಳಕ್ಕೆ ಹೊಸ ಪಿಐಗಳು ನಿಯೋಜನೆಗೊಂಡಿದ್ದಾರೆ.
ಅದರಲ್ಲಿ ಕಮೀಷನರೇಟ್ ವ್ಯಾಪ್ತಿಯಲ್ಲಿನ ಮಾರ್ಕೆಟ್ ಠಾಣೆಗೆ ಮಹಾಂತೇಶ್ ದಾಮಣ್ಣವರ, APMC ಠಾಣೆಗೆ ವಿಶ್ವನಾಥ್ ಕಬ್ಬೂರ, ಮಾಳಮಾರುತಿ ಠಾಣೆಗೆ ಕಾಲಿಮಿರ್ಚಿ, ಕ್ಯಾಂಪ್ ಠಾಣೆಗೆ ಅಲ್ತಾಫ್ ಮುಲ್ಲಾ, ನಗರದ ಮಹಿಳಾ ಠಾಣೆಗೆ ಸುಲೇಮಾನ್ ತಹಶೀಲ್ದಾರ್ ಹಾಗೂ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮಾರಿಹಾಳ ಠಾಣೆಯ ಪಿಐ ಮಹಾಂತೇಶ ಬಸ್ಸಾಪೂರ ಹುಕ್ಕೇರಿಗೆ, ನಿಪ್ಪಾಣಿ ಠಾಣೆಯ ಸಂಗಮೇಶ್ ಶಿವಯೋಗಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ಚಿಕ್ಕೋಡಿಗೆ ವಿಶ್ವನಾಥ ಚೌಗಲೇ,ಸಿಟಿ ಸ್ಪೇಶಲ್ ಬ್ಯಾಂಚ್ ಗೆ ಚನ್ನಕೇಶವ ಟಿಂಗ್ರಿಕರ್, ನಂದಗಡ ಠಾಣೆಗೆ ಎಸ್ ಸಿ ಪಾಟೀಲ ಅವರನ್ನು ನಿಯೋಜನೆ ಮಾಡಿಲಾಗಿದೆ.
ಶೀಘ್ರದಲ್ಲೇ ಎರಡನೇಯ ಪಟ್ಟಿ ಬಿಡುಗಡೆಯಾಗಲಿದೆ.

 
             
         
         
        
 
  
        
 
    