ದೆಹಲಿ :
ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಬೋರ್ಡ್ ಚೇರಮನ್ ಜಯಾವರ್ಮ ಸಿನ್ಹಾ ಅವರನ್ನು ಭೇಟಿಯಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಬೆಳಗಾವಿ- ಪಂಡರಪುರ, ಬೆಳಗಾವಿ-ಮುಂಬೈ, ಬೆಳಗಾವಿಯಿಂದ ಜಾರ್ಖಂಡನ ಶಿಖರಾಜಿ ನಿಲ್ದಾಣದವರೆಗೆ ಹೊಸ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಹಂಪಿ ಏಕ್ಸಪ್ರೇಸ್ ರೈಲನ್ನು ವ್ಹಾಯಾ ಧರ್ಮಾವರಂನಿಂದ ಪ್ರಶಾಂತಿ ನಿಲಯಂ (ಪುಟಪುರ್ತಿವರೆಗೆ) ವಿಸ್ತರಿಸಲು ವಿನಂತಿಸಿದರು.
ರೈಲ್ವೆ ಬೋರ್ಡ್ ಚೇರಮನ್ ಜಯಾವರ್ಮ ಸಿನ್ಹಾ ಅವರು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.