ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತ ಎಂದು ಕೆಲವು ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆಯುತ್ತಿಲ್ಲ ಎನ್ನಲಾಗಿದೆ. ಕೆಲ ಕಡೆ ಬೇಕಾಬಿಟ್ಟಿ ಶೂನ್ಯ ದರದ ಟಿಕೆಟ್ ನೀಡ್ತಿರೋ ಆರೋಪ ಸಹ ಕೇಳಿ ಬಂದಿದೆ. ಆದ್ದರಿಂದ ದಂಡಾಸ್ತ್ರ ಪ್ರಯೋಗಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಸಾರಿಗೆ ಬಸ್ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಂದ ಕೆಎಸ್ಆರ್ಟಿಸಿ ಭರ್ಜರಿ ದಂಡವನ್ನು ವಸೂಲಿ ಮಾಡಿದೆ. ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಏಪ್ರಿಲ್ ತಿಂಗಳಲ್ಲಿ 3,780 ಟಿಕೆಟ್ ರಹಿತ ಪ್ರಯಾಣಿಕರಿಗೆ 7,32,495 ರೂಪಾಯಿಗಳ ದಂಡವನ್ನು ವಿಧಿಸಿದೆ. ಅಷ್ಟೇ ಅಲ್ಲದೇ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಗಳನ್ನು ಜರುಗಿಸಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಸರ್ವಿಸ್ ಆರಂಭವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ರೂ ಶೂನ್ಯ ದರದ ಟಿಕೆಟ್ ನೀಡಲಾಗುತ್ತಿದೆ. ಆದರೆ ಫ್ರೀ ಅಂತ ಬಸ್ ಟಿಕೆಟ್ ತೆಗೆದುಕೊಳ್ಳೋದನ್ನು ಮಿಸ್ ಮಾಡಿದವರಿಗೆ ಕೆಎಸ್ಆರ್ಟಿಸಿ ಭಾರೀ ದಂಡವನ್ನೇ ವಿಧಿಸುತ್ತಿದೆ.
ಪ್ರಯಾಣಿಕರಿಂದ ಭಾರೀ ದಂಡ ವಸೂಲಿ ಫ್ರೀ ಅಂತ ಮಹಿಳೆಯರು ಟಿಕೆಟ್ ಪಡೆಯದೆ ಪ್ರಯಾಣಿಸುವಂತಿಲ್ಲ. ಆಧಾರ ಕಾರ್ಡ್ ತೋರಿಸಿ ಟಿಕೆಟ್ ಪಡೆಯಲೇಬೇಕು. ಎಲ್ಲಿಂದ-ಎಲ್ಲಿಗೆ ಟಿಕೆಟ್ ತೆಗೆದುಕೊಂಡಿದ್ದಿರೋ ಆ ನಿಲ್ದಾಣದಲ್ಲೇ ಇಳಿಯಬೇಕು. ಬೇಕಾಬಿಟ್ಟಿಯಾಗಿ ರೂಲ್ಸ್ ಬ್ರೇಕ್ ಮಾಡಿದ್ರು ದಂಡ ಫಿಕ್ಸ್.
ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರು ತಮ್ಮ ಗುರುತಿನ ಚೀಟಿ ತೋರಿಸಿ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಶೂನ್ಯ ದರದ ಟಿಕೆಟ್ ಪಡೆಯದೇ ಇದ್ದರೆ ದಂಡ ಬೀಳುತ್ತಾ ಅನ್ನೋ ಪ್ರಶ್ನೆ ಮುನ್ನಲೆಗೆ ಬಂದಿದೆ.
ಮಹಿಳಾ ಪ್ರಯಾಣಿಕರು ಶೂನ್ಯ ದರದ ಟಿಕೆಟ್ ಪಡೆದುಕೊಳ್ಳದಿದ್ರೆ ದಂಡ ಪಾವತಿಸಬೇಕು. ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ನಿರ್ವಾಹಕರು ಟಿಕೆಟ್ ನೀಡಲು ಹರಸಾಹಸಪಡುತ್ತಿದ್ದಾರೆ.
ಫ್ರೀ ಅಲ್ಲವೇ ಅಂತ ಕೆಲವು ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆಯುತ್ತಿಲ್ಲ ಎನ್ನಲಾಗಿದೆ. ಕೆಲ ಕಡೆ ಬೇಕಾಬಿಟ್ಟಿ ಶೂನ್ಯ ದರದ ಟಿಕೆಟ್ ನೀಡ್ತಿರೋ ಆರೋಪ ಸಹ ಕೇಳಿ ಬಂದಿದೆ.