ಬೆಳಗಾವಿ :
ವಿಕಲಚೇತನರ ನಗದ ಕಾರ್ಮಿಕ ಭವನ, ಕಛೇರಿ ಸಭಾಂಗಣದಲ್ಲಿ (ಸೆ.೨೧) ರಂದು ಬೆಳಗಾವಿಯಲ್ಲಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ನೊಂದಣಿ ಮಾಡಿಸುವ ಸಲುವಾಗಿ ಹಾಗೂ ಕಾಯ್ದೆಯ ಅನುಷ್ಠಾನದ ಬಗ್ಗೆ ಮಾಹಿತಿಯನ್ನು ನೀಡಲು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಬಗ್ಗೆ ಮತ್ತು ಕಾಯ್ದೆಯ ಅನುಷ್ಠಾನದ ಕುರಿತು ವಿವರಣೆ ನೀಡಿ, ಎಲ್ಲಾ ಸಂಘಟನೆಯವರಿಗೆ ತಮ್ಮ ತಮ್ಮ ಸಂಘದಲ್ಲಿ ಬರುವ ವ್ಯಾಪಾರಸ್ತರನ್ನು ಅಂಗಡಿಕಾರರನ್ನು ಸದರಿ ಕಾಯ್ದೆಯಡಿಯಲ್ಲಿ ನೊಂದಣಿ ಮಾಡಿಸಬೇಕೆಂದು ಬೆಳಗಾವಿ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಡಿ. ಜಿ. ನಾಗೇಶ ಅವರು ಹೇಳಿದರು.
ಉಪ ವಿಭಾಗ-೧ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಎಸ್ ಜೋಗುರ, ಉಪ ವಿಭಾಗ-೨ ಕಾರ್ಮಿಕ ಅಧಿಕಾರಿಯದ ತರನ್ನುಮ ಎ ಬೆಂಗಾಲಿ, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರುಗಳು, ಹೊಟೇಲ ಮಾಲೀಕರ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಹೊಲಸೇಲ್ ಬಟ್ಟೆ ವ್ಯಾಪಾರಿಗಳ ಸಂಘ, ಕಿರಾಣಾ ವರ್ತಕರ ಸಂಘ, ಹೋಲಸೇಲ್, ಕಿರಾಣಾ ವರ್ತಕರ ಸಂಘ, ಔಷಧಿ ವ್ಯಾಪಾರಿಗಳ ಸಂಘ, ಕೃಷಿ ಮಾರುಕಟ್ಟೆ ವರ್ತಕರ ಸಂಘ, ಸಿಹಿ ತಿಂಡಿ ಮಾರಾಟಗಾರರ ಸಂಘ, ಮಂಡಕ್ಕಿ ಭಟ್ಟಿ ಮಾಲೀಕರ ಸಂಘ, ಹೂವು ಮಾರಾಟಗಾರರ ಸಂಘ, ತರಕಾರಿ ಮಾರಾಟಗಾರರ ಸಂಘ, ಹಣ್ಣು ಮಾರಾಟಗಾರರ ಸಂಘ ಹಾಗೂ ಇತರೆ ಎಲ್ಲಾ ಸಂಘಟನೆಯವರು ಉಪಸ್ಥಿತರಿದ್ದರು.