ಬೆಳಗಾವಿ :
ಸುವರ್ಣ ವಿಧಾನಸೌಧಕ್ಕೆ ಇಂದು ಭರ್ತಿ ಹತ್ತು ವರ್ಷ. ಆಗ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಸುವರ್ಣ ಸೌಧವನ್ನು ಉದ್ಘಾಟಿಸಿದರು.
2012 ಅಕ್ಟೋಬರ್ 11 ರಂದು ಉದ್ಘಾಟನೆಗೊಂಡ ಸೌಧದಲ್ಲಿ ಇದುವರೆಗೆ 8ಅಧಿವೇಶನ ನಡೆದಿವೆ. ಐವರು ಮುಖ್ಯಮಂತ್ರಿಗಳು ಆಡಳಿತ.
16 ವರ್ಷಗಳ ಹಿಂದೆ ಕುಮಾರಸ್ವಾಮಿ ನೇತೃತ್ವದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಪ್ರತಿವರ್ಷ ಅಧಿವೇಶನ ನಡೆಸಲು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಅದರಂತೆ ಸೆಪ್ಟೆಂಬರ್ 25 ರಿಂದ 29 ರವರೆಗೆ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ.
ಸುವರ್ಣ ವಿಧಾನಸೌಧಕ್ಕೆ ಉತ್ತರ ಕರ್ನಾಟಕ ಭಾಗದ ಹಲವು ಕಚೇರಿಗಳನ್ನು ಸ್ಥಳಾಂತರಿಸಿ ಆಡಳಿತ ವಿಕೇಂದ್ರೀಕರಣ ಎಂದು ಕೂಗು . ಸರಕಾರ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡಿದೆ. ಆದರೆ ಇನ್ನೂ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡುವ ಮೂಲಕ ಸೌಧವನ್ನು ಕ್ರಿಯಾಶೀಲತೆಗಳಿಗೆ ತೆರೆದಿಡಬೇಕು ಎಂದು ಕನ್ನಡಿಗರ ಚಟುವಟಿಕೆಗೆ ಒತ್ತಾಯಿಸಲಾಗಿದೆ.