ಬೆಂಗಳೂರು :
ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲು ಯುವ ಸಮೂಹ ಸಜ್ಜಾಗಿದೆ.
ಸೇಂಟ್ ವ್ಯಾಲೆಂಟೈನ್ ಅವರ ಮರಣ ದಿನದ ನೆನಪಿಗಾಗಿ ಇಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಕ್ರಿ.ಶ. 270 ರಲ್ಲಿ ರೋಮ್ ಸಾಮ್ರಾಜ್ಯ ಆಳುತ್ತಿದ್ದ ರಾಜ 2 ನೇ ಕ್ಲಾಡಿಯಸ್ ಸೈನಿಕರು ಸಂಪೂರ್ಣವಾಗಿ ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವರಿಗೆ ಮದುವೆಯಾಗಲು ಬಿಡುತ್ತಿರಲಿಲ್ಲ . ಆದರೆ ವ್ಯಾಲೆಂಟೈನ್ ಎಂಬ ಸಂತ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದರು. ಇದು ರಾಜನಿಗೆ ತಿಳಿದು ಫೆ. 14 ರಂದು ಅವರನ್ನು ಸೆರೆಮನೆಗೆ ತಳ್ಳಿದ. ಅಲ್ಲೇ ಸಂತ ಮರಣ ಹೊಂದಿದ್ದರು ಎಂಬ ಕಥೆ ಇದೆ.
ಈ ನಡುವೆ ಪ್ರೇಮಿಗಳ ದಿನಕ್ಕೆ ಮುತಾಲಿಕ್ ಎಚ್ಚರಿಕೆ ರವಾನಿಸಿದ್ದಾರೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಪಾರ್ಕ್ , ಪಾರ್ಲರ್ , ಹೋಟೆಲ್ ಮೇಲೆ ಶ್ರೀರಾಮ ಸೇನೆ ನಿಗಾ ಇರಿಸಲಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತ ಬಂದಿದ್ದೇವೆ. ಈ ಬಾರಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯ ನಡೆಯಲಿದೆ. ಪ್ರೇಮಿಗಳ ದಿನಾಚರಣೆ ಹೆಸರಲ್ಲಿ ನಡೆಯುವ ಡ್ರಗ್ , ಸೆಕ್ಸ್ ಮಾಫಿಯಾ ತಡೆಯುವುದು ನಮ್ಮ ಉದ್ದೇಶ . ಕಾನೂನು ಬದ್ಧವಾಗಿಯೇ ಈ ಕೆಲಸವನ್ನು ಶ್ರೀರಾಮ ಸೇನೆ ಮಾಡುತ್ತದೆ ಎಂದು ಮುತಾಲಿಕ್ ತಿಳಿಸಿದ್ದಾರೆ.